ADVERTISEMENT

ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಬಿಎಫ್‌ಸಿ ಜಯಭೇರಿ

ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 13:44 IST
Last Updated 4 ಫೆಬ್ರುವರಿ 2021, 13:44 IST
ಬೆಂಗಳೂರು ಎಫ್‌ಸಿ ತಂಡದ ರಾಹುಲ್ ರಾಜು (ಬಿಳಿ ಪೋಷಾಕು) ಹಾಗೂ ಎಡಿಇ ಎಫ್‌ಸಿ ತಂಡದ ಪವನ್ ಕುಮಾರ್‌ ಅವರು ಚೆಂಡಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿದರು– ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ.
ಬೆಂಗಳೂರು ಎಫ್‌ಸಿ ತಂಡದ ರಾಹುಲ್ ರಾಜು (ಬಿಳಿ ಪೋಷಾಕು) ಹಾಗೂ ಎಡಿಇ ಎಫ್‌ಸಿ ತಂಡದ ಪವನ್ ಕುಮಾರ್‌ ಅವರು ಚೆಂಡಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿದರು– ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ.   

ಬೆಂಗಳೂರು: ಭರ್ಜರಿ ಆಟವಾಡಿದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಬಿಡಿಎಫ್‌ಎ ಸೂಪರ್‌ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗುರುವಾರ3–0 ಗೋಲುಗಳ ಅಂತರದಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು.

ವಿಜೇತ ತಂಡದ ಪರ ದಮೈಲ್‌ಫಾಂಗ್ ಲಿಂಗ್ಡೊ (52ನೇ ನಿಮಿಷ), ಹೈದ್ರೊಮ್‌ ತೋಯ್ ಸಿಂಗ್‌ (56ನೇ ನಿಮಿಷ) ಹಾಗೂ ಜಗದೀಪ್ ಸಿಂಗ್‌ (64ನೇ ನಿಮಿಷ) ಕಾಲ್ಚಳಕ ತೋರಿದರು.

ಮತ್ತೊಂದು ಹಣಾಹಣಿಯಲ್ಲಿ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು 3–0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡದ ಎದುರು ಗೆಲುವು ಸಾಧಿಸಿತು. ಕಿಕ್‌ಸ್ಟಾರ್ಟ್‌ ತಂಡದ ಸುಧೀರ್‌ ಕೋಟಿಕೇಳ (10ನೇ ನಿಮಿಷ), ನಿಖಿಲ್‌ ರಾಜ್ ಎಂ. (57ನೇ ನಿಮಿಷ) ಮತ್ತು ಜಾನ್ ಪೀಟರ್‌ (90ನೇ ನಿಮಿಷ, ಪೆನಾಲ್ಟಿ) ಗೋಲು ಹೊಡೆದರು.

ADVERTISEMENT

ಶುಕ್ರವಾರ ಈಗಲ್ಸ್ ಎಫ್‌ಸಿ ಮತ್ತು ಎಎಸ್‌ಸಿ ಸೆಂಟರ್‌ ಎಫ್‌ಸಿ ನಡುವೆ ಸೆಣಸಾಟ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.