ನವದೆಹಲಿ: ಇದೇ ಜೂನ್- ಜುಲೈನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತ ಮಹಿಳಾ ಫುಟ್‌ಬಾಲ್ ತಂಡದ ರಾಷ್ಟ್ರೀಯ ಶಿಬಿರಕ್ಕೆ 39 ಸಂಭಾವ್ಯ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ.
ತಂಡದ ಮುಖ್ಯ ಕೋಚ್ ಕ್ರಿಸ್ಪಿನ್ ಚೆಟ್ರಿ ಅವರು ಆಟಗಾರ್ತಿಯರ ಆಯ್ಕೆಯನ್ನು ಪ್ರಕಟಿಸಿದ್ದಾರೆ. ಜೂನ್ 23ರಿಂದ ಜುಲೈ 5ರವರೆಗೆ ಥಾಯ್ಲೆಂಡ್‌ನ ಚಿಯಾಂಗ್ ಮಾಯ್‌ನಲ್ಲಿ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಭಾರತ ಮಹಿಳಾ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅದೇ ಗುಂಪಿನಲ್ಲಿರುವ ಆತಿಥೇಯ ಥಾಯ್ಲೆಂಡ್, ಮಂಗೋಲಿಯಾ, ಟಿಮೋರ್-ಲೆಸ್ಟೆ ಮತ್ತು ಇರಾಕ್ ತಂಡಗಳ ವಿರುದ್ಧ ಆಡಲಿದೆ.
ಸೀನಿಯರ್ ಮಹಿಳಾ ತಂಡದ ರಾಷ್ಟ್ರೀಯ ಶಿಬಿರವು ಮೇ 1ರಂದು ಬೆಂಗಳೂರಿನ ಪಡುಕೋಣೆ– ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಪ್ರಾರಂಭವಾಗಲಿದೆ. ತಂಡದಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅಕ್ಟೋಬರ್‌ನಲ್ಲಿ ನಡೆದ 2024ರ ಸ್ಯಾಫ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಅನುಭವಿ ಆಟಗಾರ್ತಿಯರಾದ ಬಾಲಾ ದೇವಿ ಮತ್ತು ಆಶಾಲತಾ ದೇವಿ ಅವರು ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಸಂಭಾವ್ಯರ ಪಟ್ಟಿ ಹೀಗಿದೆ
ಗೋಲ್‌ಕೀಪರ್ಸ್: ಪಾಯಲ್ ಬಸುದೆ, ಎಲಂಗ್‌ಬಮ್ ಪಂಥೋಯಿ ಚಾನು, ಕೇಶಮ್ ಮೆಲೋಡಿ ಚಾನು, ಎಂ. ಮೊನಾಲಿಸಾ ದೇವಿ.
ಡಿಫೆಂಡರ್ಸ್: ಪೂರ್ಣಿಮಾ ಕುಮಾರಿ, ಪಿ. ನಿರ್ಮಲಾ ದೇವಿ, ಮಾರ್ಟಿನಾ ಥೋಕ್‌ಚೋಮ್, ಶುಭಾಂಗಿ ಸಿಂಗ್, ಸಂಜು, ಮಾಲತಿ ಮುಂಡಾ, ಟಿ. ಥೋಬಿಸಾನಾ ಚಾನು, ಎಸ್. ರಂಜನಾ ಚಾನು, ಎನ್. ಸ್ವೀಟಿ ದೇವಿ, ವಿಕ್ಷಿತ್ ಬಾರಾ, ಎಚ್. ಶಿಲ್ಕಿ ದೇವಿ.
ಮಿಡ್‌ಫೀಲ್ಡರ್ಸ್: ಕಿರಣ್ ಪಿಸ್ಡಾ, ಎನ್. ರತನ್‌ಬಾಲಾ ದೇವಿ, ಮುಸ್ಕಾನ್ ಸುಬ್ಬಾ, ಎಲ್. ಬಬಿನಾ ದೇವಿ, ಕಾರ್ತಿಕಾ, ಸಿಂಡಿ ರೆಮ್ರುತ್ಪುಯಿ ಕಾಲ್ನಿ, ಸಂಗೀತಾ ಬಾಸ್ಫೋರ್, ಪ್ರಿಯದರ್ಶಿನಿ ಎಸ್, ಬೇಬಿ ಸನಾ, ಸಂತೋಷ್, ಅಂಜು ತಮಾಂಗ್.
ಫಾರ್ವರ್ಸ್: ಮೌಸುಮಿ ಮುರ್ಮು, ಮಾಳವಿಕಾ ಪಿ, ಸಂಧಿಯಾ ರಂಗನಾಥನ್, ಸೌಮ್ಯಾ ಗುಗುಲೋತ್, ಸುಲಂಜನಾ ರೌಲ್, ಲಿಂಡಾ ಕೋಮ್ ಸೆರ್ಟೊ, ರಿಂಪಾ ಹಲ್ದಾರ್, ಮನಿಷಾ ನಾಯಕ್, ರೇಣು, ಕರಿಷ್ಮಾ ಪುರುಷೋತ್ತಮ್, ಸುಮತಿ ಕುಮಾರಿ, ಮನೀಶಾ ಕಲ್ಯಾಣ್, ಗ್ರೇಸ್ ಡ್ಯಾಂಗ್‌ಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.