ADVERTISEMENT

ಐ ಲೀಗ್‌: ಡೆಲ್ಲಿ ಎಫ್‌ಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 19:31 IST
Last Updated 12 ಅಕ್ಟೋಬರ್ 2021, 19:31 IST

ಬೆಂಗಳೂರು: ಉತ್ತಮ ಆಟವಾಡಿದ ಡೆಲ್ಲಿ ಎಫ್‌ಸಿ ತಂಡವು ಐ–ಲೀಗ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಕೇರಳ ಯುನೈಟೆಡ್‌ ಎಫ್‌ಸಿ ಎದುರು 2–1ರಿಂದ ಜಯ ಸಾಧಿಸಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪರ ಅನ್ವರ್‌ ಅಲಿ (47ನೇ ನಿಮಿಷ) ಹಾಗೂ ಹಿಮಾಂಶು ಜಾಂಗ್ರಾ (60ನೇ ನಿಮಿಷ) ಕಾಲ್ಚಳಕ ತೋರಿದರು.

ಹೃಷಿ ಧಾತ್‌ (23ನೇ ನಿಮಿಷ) ಕೇರಳ ಪರ ಒಂದು ಗೋಲು ದಾಖಲಿಸಿದರು.

ADVERTISEMENT

ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದರುವ ಡೆಲ್ಲಿ ತಂಡವು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೆಂಕ್ರೆ ಎಫ್‌ಸಿ ಕಾರ್ಬೆಟ್‌ ಎಫ್‌ಸಿಯೊಡನೆ ಗೋಲುರಹಿತ ಡ್ರಾ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.