ADVERTISEMENT

ಡುರಾಂಡ್ ಕಪ್ ಫುಟ್‌ಬಾಲ್: ಗೋವಾ ಎದುರಾಳಿ, ಕ್ವಾರ್ಟರ್‌ ಮೇಲೆ ಬಿಎಫ್‌ಸಿ ಕಣ್ಣು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:45 IST
Last Updated 29 ಆಗಸ್ಟ್ 2022, 19:45 IST
ಸುನಿಲ್ ಚೆಟ್ರಿ ಮತ್ತು ರಾಯ್‌ ಕೃಷ್ಣ
ಸುನಿಲ್ ಚೆಟ್ರಿ ಮತ್ತು ರಾಯ್‌ ಕೃಷ್ಣ   

ಕೋಲ್ಕತ್ತ:ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ)ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಎಫ್‌ಸಿ ಗೋವಾ ತಂಡಕ್ಕೆ ಮುಖಾಮುಖಿಯಾಗಲಿದ್ದು, ಎಂಟರಘಟ್ಟ ತಲು‍ಪುವ ಹಂಬಲದಲ್ಲಿದೆ. ಇಲ್ಲಿ ಯ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ.

ಎ ಗುಂಪಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದಿರುವ ಬೆಂಗಳೂರು ಬಳಿ ಸದ್ಯ 6 ಪಾಯಿಂಟ್‌ಗಳಿವೆ. ಈ ಪಂದ್ಯದಲ್ಲಿ ಚೆಟ್ರಿ ಹಾಗೂ ರಾಯ್‌ಕೃಷ್ಣ ಜೋಡಿಯು ಮೋಡಿ ಮಾಡುವ ನಿರೀಕ್ಷೆಯಿದೆ. ಇನ್ನು ಕೇವಲ ಒಂದು ಪಾಯಿಂಟ್ಸ್ ಕಲೆಹಾಕಿದರೆ ಚೆಟ್ರಿ ಬಳಗದ ಕ್ವಾರ್ಟರ್‌ಫೈನಲ್ ಹಾದಿ ಸುಗಮವಾಗಲಿದೆ.

ಕೋಚ್‌ ಸೈಮನ್ ಗ್ರೇಸನ್ ಅವರ ತರಬೇತಿಯಲ್ಲಿ ಪಳಗಿರುವ ಬಿಎಫ್‌ಸಿ ಮೊದಲ ಪಂದ್ಯದಲ್ಲಿ ಜಮ್ಶೆಡ್‌ಪುರ ಎದುರು 2–1ರಿಂದ ಗೆದ್ದಿತ್ತು. ನಂತರ ಇಂಡಿಯನ್ ಏರ್‌ಫೋರ್ಸ್ ತಂಡವನ್ನು 4–0ಯಿಂದ ಪರಾಭವಗೊಳಿಸಿತ್ತು.

ADVERTISEMENT

ಈ ಗುಂಪಿನಲ್ಲಿ ಮೊಹಮ್ಮಡನ್ ಸ್ಪೋರ್ಟಿಂಗ್‌ ಮೂರು ಪಂದ್ಯಗಳನ್ನು ಜಯಿಸಿ ಒಂಬತ್ತು ಪಾಯಿಂಟ್ಸ್ ಕಲೆಹಾಕಿದ್ದು ಅಗ್ರಸ್ಥಾನದಲ್ಲಿದೆ.ಗೋವಾ ಮೂರನೇ ಸ್ಥಾನದಲ್ಲಿದೆ.

ಸಿ ಗುಂಪಿನ ಪಂದ್ಯದಲ್ಲಿ ಹೈದರಾಬಾದ್‌ – ನೆರೊಕಾ ಸೆಣಸಲಿವೆ.

ಪಂದ್ಯ ಆರಂಭ: ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.