ADVERTISEMENT

ಪ್ರತಿಮೆ ಧ್ವಂಸ ಪ್ರಕರಣ: ವ್ಯಕ್ತಿ ವಶಕ್ಕೆ

ಏಜೆನ್ಸೀಸ್
Published 4 ಜುಲೈ 2018, 19:20 IST
Last Updated 4 ಜುಲೈ 2018, 19:20 IST

ಮಾಸ್ಕೊ: ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿದ್ದ ರಷ್ಯಾದ ಫುಟ್‌ಬಾಲ್‌ ಆಟಗಾರನ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ಕೊಲಂಬಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮಂಗಳವಾರ ರಾತ್ರಿ ಕೊನೆಯ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯ ನಡೆದಿತ್ತು.

2014ರಲ್ಲಿ ನಿಧನರಾದ ರಷ್ಯಾದ ಆಟಗಾರ ಫ್ಯೊದೋರ್‌ ಚೆರೆಂಕೋವ್‌ ಅವರ ಪ್ರತಿಮೆ ಇದಾಗಿತ್ತು. ಈ ಪ್ರತಿಮೆಯ ಎದೆಯ ಭಾಗದಲ್ಲಿ ‘ಇಂಗ್ಲೆಂಡ್‌’ ಎಂದು ಬರೆಯಲಾಗಿತ್ತು. ಧ್ವಂಸಗೊಂಡ ಪ್ರತಿಮೆಯ ಚಿತ್ರಗಳನ್ನು ರಷ್ಯನ್ನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಪ್ರಾಥಮಿಕ ತನಿಖೆಯ ಪ್ರಕಾರ ಈ ಕೃತ್ಯದ ಹಿಂದಿರುವ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ತನಿಖೆಯು ಮುಂದುವರಿಯಲಿದೆ’ ಎಂದು ಪೋಲಿಸರು ತಿಳಿಸಿದ್ದಾರೆ.

ವ್ಯಕ್ತಿಯ ಹೆಸರು ಹಾಗೂ ಆತ ಯಾವ ದೇಶದವನು ಎಂಬ ಬಗ್ಗೆ ಪೋಲಿಸರು ಯಾವುದೇ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.