ADVERTISEMENT

ಫುಟ್ಬಾಲ್‌ ವಿಜೇತರ ನೋಡಲು ಜನಸಾಗರ: ಅರ್ಜೆಂಟೀನಾ ತಂಡದ ಆಟಗಾರರ ಏರ್‌ಲಿಫ್ಟ್‌

ಅರ್ಜೆಂಟೀನಾದ ರಾಜಧಾನಿಯ ಬೀದಿಗಳಲ್ಲಿ ಜಮಾಯಿಸಿದ 40 ಲಕ್ಷ ಮಂದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 10:57 IST
Last Updated 21 ಡಿಸೆಂಬರ್ 2022, 10:57 IST
ಅರ್ಜೆಂಟೀನಾ ತಂಡಕ್ಕೆ ಅಭಿಮಾನಿಗಳಿಂದ ಸ್ವಾಗತ (ಏಜೆನ್ಸಿ ಚಿತ್ರ)
ಅರ್ಜೆಂಟೀನಾ ತಂಡಕ್ಕೆ ಅಭಿಮಾನಿಗಳಿಂದ ಸ್ವಾಗತ (ಏಜೆನ್ಸಿ ಚಿತ್ರ)   

ಬ್ಯೂನೊಸ್‌ ಐರಿಸ್‌: ಫಿಫಾ ಪುಟ್ಬಾಲ್‌ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿರುವ ಅರ್ಜೆಂಟೀನಾ ತಂಡದ ಸದಸ್ಯರಿಗೆ ತವರಿನಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ರಾಜಧಾನಿ ಬ್ಯೂನೊಸ್‌ ಐರಿಸ್‌ನ ರಸ್ತೆಗಳಲ್ಲಿ ಜನ ಕಿಕ್ಕಿರಿದು ಸೇರಿ, ವಿಶ್ವ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ಬ್ಯೂನೊಸ್‌ ಐರಿಸ್‌ನ ರಸ್ತೆಗಳಲ್ಲಿ ಸುಮಾರು 40 ಲಕ್ಷ ಮಂದಿ ಸೇರಿದ್ದರು. ಆಟಗಾರರನ್ನು ತೆರೆದ ಬಸ್‌ನಲ್ಲಿ ಮೆರವಣಿಗೆ ಮಾಡಲಾಯ್ತು. ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಬಸ್‌ ಮುಂದಕ್ಕೆ ಸಾಗಲಾಗದೆ, ಕೊನೆಗೆ ಲಿಯೊನೆಲ್‌ ಮೆಸ್ಸಿ ಸಮೇತ ತಂಡದ ಸದಸ್ಯರನ್ನು ಏರ್‌ ಲಿಫ್ಟ್‌ ಮಾಡಬೇಕಾಗಿ ಬಂತು.

ಮಂಗಳವಾರ ಸ್ಥಳೀಯ ಸಮಯ ಮುಂಜಾನೆ 3 ಗಂಟೆಗೆ ತೆರೆದ ಬಸ್‌ನಲ್ಲಿ ಮೆರವಣಿಗೆ ಆರಂಭವಾಯ್ತು. ಆದರೆ ಜನಜಂಗುಳಿಯಿಂದಾಗಿ ಬಸ್‌ ಮುಂದಕ್ಕೆ ಚಲಿಸಲು ಸಾಧ್ಯವಾಗದೇ ಆಟಗಾರರನ್ನು ಏರ್‌ಲಿಫ್ಟ್‌ ಮಾಡಲಾಯ್ತು.

ADVERTISEMENT

36 ವರ್ಷಗಳ ಬಳಿಕ ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ಒಲಿದು ಬಂದ ಈ ಗೆಲುವುನ್ನು ಸಂಭ್ರಮಿಸಲು, ದೇಶದಾದ್ಯಂತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. ಅರ್ಜೆಂಟಿನಾದ ರಾಷ್ಟ್ರಧ್ವಜ, ಫುಟ್ಬಾಲ್‌ ತಂಡ ಜೆರ್ಸಿ ಧರಿಸಿ ರಸ್ತೆ, ಫ್ಲೈ ಓವರ್‌ಗಳಲ್ಲಿ ಜಮಾಯಿಸಿದ್ದರು. ತಮ್ಮ ನೆಚ್ಚಿನ ತಾರೆಗಳನ್ನು ವೀಕ್ಷಿಸಲು ವಿದ್ಯುತ್‌ ಕಂಬಗಳ ಮೇಲೆ ಹತ್ತಿ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.