ADVERTISEMENT

ಫುಟ್‌ಬಾಲ್ ಆಟಗಾರ ಸ್ಯಾಮ್‌ ನಿಧನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:32 IST
Last Updated 28 ಡಿಸೆಂಬರ್ 2020, 19:32 IST
ಸ್ಯಾಮ್ ಗೋಮೆಜ್‌
ಸ್ಯಾಮ್ ಗೋಮೆಜ್‌   

ಬೆಂಗಳೂರು: ಕರ್ನಾಟಕ ತಂಡವನ್ನು ರಾಷ್ಟ್ರೀಯ ಸಬ್‌ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರತಿನಿಧಿಸಿದ್ದ ಸ್ಯಾಮ್‌ ಗೋಮೆಜ್‌ (60) ಅವರು ಕೇರಳ ತ್ರಿಶ್ಶೂರ್‌ನ ನಿವಾಸದಲ್ಲಿಸೋಮವಾರ ಹೃದಯಾಘಾತದಿಂದ ನಿಧನರಾದರು.

1978ರಲ್ಲಿ ಮದ್ರಾಸ್‌ ಇಂಜಿನಿಯರಿಂಗ್ ಗ್ರೂಪ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು, ಸುಮಾರು 14 ವರ್ಷಗಳ ಕಾಲ ಆ ತಂಡವನ್ನು ಪ್ರತಿನಿಧಿಸಿದ್ದರು. ರೋ ವರ್ಸ್‌, ಡುರಾಂಡ್‌ ಹಾಗೂ ಡಿಸಿಎಂ ಕಪ್ ಟೂರ್ನಿಗಳಲ್ಲಿ ಆಡಿದ್ದರು. ಬಳಿಕ ಸದರ್ನ್ ಕಮಾಂಡ್‌ ಹಾಗೂ ಸರ್ವೀಸಸ್‌ ತಂಡಗಳ ಪರ ಕಣಕ್ಕಿಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT