ADVERTISEMENT

ವಿಶ್ವಕಪ್ ಫುಟ್‌ಬಾಲ್: ಎಂಬಾಪೆ ಗೋಲು ಡಬಲ್‌, ನಾಕೌಟ್‌ಗೆ ಫ್ರಾನ್ಸ್

ಡೆನ್ಮಾರ್ಕ್‌ ಎದುರು 2–1ರ ಜಯಭೇರಿ

ರಾಯಿಟರ್ಸ್
Published 27 ನವೆಂಬರ್ 2022, 7:00 IST
Last Updated 27 ನವೆಂಬರ್ 2022, 7:00 IST
ಕೈಲಿಯನ್ ಎಂಬಾಪೆ– ಎಎಫ್‌ಪಿ ಚಿತ್ರ
ಕೈಲಿಯನ್ ಎಂಬಾಪೆ– ಎಎಫ್‌ಪಿ ಚಿತ್ರ   

ದೋಹಾ: ಫ್ರಾನ್ಸ್ ತಂಡವು ಈ ಬಾರಿಯ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ 16ರ ಘಟ್ಟ ತಲುಪಿದ ಮೊದಲ ತಂಡ ಎನಿಸಿಕೊಂಡಿತು. ಎರಡು ಗೋಲು ಗಳಿಸಿದ ತಾರಾ ಆಟಗಾರ ಕೈಲಿಯನ್ ಎಂಬಾಪೆ ಗೆಲುವಿನ ರೂವಾರಿಯಾದರು.

ಶನಿವಾರ ರಾತ್ರಿ ಇಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ 2–1ರಿಂದ ಡೆನ್ಮಾರ್ಕ್‌ ತಂಡಕ್ಕೆ ಸೋಲುಣಿಸಿತು. ಗುಂಪಿನಲ್ಲಿ ಆರು ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದೊಂದಿಗೆ ನಾಕೌಟ್‌ಗೆ ಅರ್ಹತೆ ಪಡೆಯಿತು.

ಜಿದ್ದಾಜಿದ್ದಿನ ಪಂದ್ಯದ ಮೊದಲಾರ್ಧ ಗೋಲುರಹಿತವಾಗಿತ್ತು. 61ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಎಂಬಾಪೆ ಫ್ರಾನ್ಸ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಇದಾದ ಏಳು ನಿಮಿಷದಲ್ಲೇ ಡೆನ್ಮಾರ್ಕ್‌ ತಿರುಗೇಟು ನೀಡಿತು. ಆ್ಯಂಡ್ರಿಯಾಸ್‌ ಕ್ರಿಸ್ಟೆನ್ಸನ್‌ ಹೆಡರ್‌ ಮೂಲಕ ಗಳಿಸಿದ ಗೋಲು ಸಮಬಲಕ್ಕೆ ಕಾರಣವಾಯಿತು. ಫ್ರಾನ್ಸ್ ಗೋಲುಕೀಪರ್ ಹ್ಯುಗೊ ಲಾರಿಸ್‌ ಅವರನ್ನು ವಂಚಿಸಿದ ಚೆಂಡು ಗೋಲ್‌ಪೋಸ್ಟ್ ಸೇರಿತು.

ADVERTISEMENT

86ನೇ ನಿಮಿಷದಲ್ಲಿ ಅಂಟೊನಿಯೊ ಗ್ರಿಜ್‌ಮನ್‌ ನೀಡಿದ ಕ್ರಾಸ್‌ನಲ್ಲಿ ಸುಂದರ ಗೋಲು ಹೊಡೆದ ಎಂಬಾಪೆ ಫ್ರಾನ್ಸ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.