ಭುವನೇಶ್ವರ್ (ಪಿಟಿಐ): ಇಲ್ಲಿ ನಡೆಯಲಿರುವ ಫಿಫಾ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ತಂಡವನ್ನು ಬುಧವಾರ ಘೋಷಿಸಲಾಯಿತು.
ಮುಖ್ಯ ಕೋಚ್ ಥಾಮಸ್ ಡೆನರ್ಬಿ ಅವರು 21 ಆಟಗಾರ್ತಿಯರ ತಂಡವನ್ನು ಪ್ರಕಟಿಸಿದ್ದಾರೆ. ತಂಡವು ಎ ಗುಂಪಿನಲ್ಲಿ ಆಡಲಿದೆ. ಅಮೆರಿಕ, ಮೊರಾಕ್ಕೊ ಹಾಗೂ ಬ್ರೆಜಿಲ್ ಇದೇ ಗುಂಪಿನಲ್ಲಿವೆ.ಅಕ್ಟೋಬರ್ 11ರಿಂದ ಇಲ್ಲಿಯ ಕಳಿಂಗ ಕ್ರೀಡಾಂಗಣದಲ್ಲಿ ಟೂರ್ನಿ ಆರಂಭವಾಗಲಿದೆ.
ತಂಡ: ಗೋಲ್ಕೀಪರ್ಸ್: ಮೊನಾಲಿಷಾದೇವಿ ಮೋರಾಂಗ್ತೆಮ್, ಮೆಲೊಡಿ ಚಾನು ಕೀಶಮ್, ಅಂಜಲಿ ಮುಂಡಾ. ಡಿಫೆಂಡರ್ಸ್: ಅಸ್ತಮ್ ಒರೆಯಾನ್, ಕಾಜಲ್, ನಕೆತಾ, ಪೂರ್ಣಿಮಾ ಕುಮಾರಿ, ವರ್ಷಿಕಾ, ಶಿಲ್ಕಿದೇವಿ ಹೆಮಮ್. ಮಿಡ್ಫೀಲ್ಡರ್ಸ್: ಬಬಿನಾ ದೇವಿ ಲಿಶಮ್, ನೀತು ಲಿಂಡಾ, ಶೈಲಜಾ ಶುಭಾಂಗಿ ಸಿಂಗ್. ಫಾರ್ವರ್ಡ್ಸ್: ಅನಿತಾಕುಮಾರಿ, ಲಿಂಡ್ ಕೋಮ್ ಸರ್ಟೊ, ನೆಹಾ, ರಜಿಯಾ ದೇವಿ ಲೈಶ್ರಮ್, ಶೆಲಿಯಾದೇವಿ ಲೊಕ್ಟೊಂಗ್ಬಮ್, ಕಾಜೊಲ್ ಹಬರ್ಟ್ ಡಿಸೋಜಾ, ಲಾವಣ್ಯ ಉಪಾಧ್ಯಾಯ, ಸುಧಾ ಅಂಕಿತಾ ಟಿರ್ಕಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.