ADVERTISEMENT

ಡಿಸೆಂಬರ್‌ನಲ್ಲಿ ಭಾರತ–ಒಮನ್‌ ಪಂದ್ಯ

ಪಿಟಿಐ
Published 26 ನವೆಂಬರ್ 2018, 20:00 IST
Last Updated 26 ನವೆಂಬರ್ 2018, 20:00 IST
ಸ್ಟೀಫನ್ ಕಾನ್ಸ್‌ಟೆಂಟೈನ್‌
ಸ್ಟೀಫನ್ ಕಾನ್ಸ್‌ಟೆಂಟೈನ್‌   

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದವರು ಡಿಸೆಂಬರ್‌ 27ರಂದು ಅಬುಧಾಬಿಯಲ್ಲಿ ನಡೆಯುವ ಪಂದ್ಯದಲ್ಲಿ ಒಮನ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

‘ಮುಂಬರುವ ಎಎಫ್‌ಸಿ ಏಷ್ಯಾ ಕಪ್‌ ಟೂರ್ನಿಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಭಾರತ ತಂಡಕ್ಕೆ ಈ ಪಂದ್ಯ ನೆರವಾಗಲಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಸೋಮವಾರ ತಿಳಿಸಿದೆ.

ಏಷ್ಯಾ ಕಪ್‌ ಟೂರ್ನಿ 2019ರ ಜನವರಿ 5ರಿಂದ ಫೆಬ್ರುವರಿ 1ರವರೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಆಯೋಜನೆಯಾಗಿದೆ.

ADVERTISEMENT

ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದು, ಜನವರಿ 6ರಂದು ನಡೆಯುವ ತನ್ನ ಮೊದಲ ಹೋರಾಟದಲ್ಲಿ ಥಾಯ್ಲೆಂಡ್‌ ವಿರುದ್ಧ ಸೆಣಸಲಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಮನ್‌ ತಂಡ 84ನೇ ಸ್ಥಾನದಲ್ಲಿದೆ. ಭಾರತ 97ನೇ ಸ್ಥಾನ ಹೊಂದಿದೆ. ಉಭಯ ತಂಡಗಳು 2015ರಲ್ಲಿ ಕೊನೆಯ ಸಲ ಮುಖಾಮುಖಿಯಾಗಿದ್ದವು. ಆಗ ನಡೆದಿದ್ದ 2018ರ ಫಿಫಾ ವಿಶ್ವಕಪ್‌ನ ಅರ್ಹತಾ ಟೂರ್ನಿಯ ಎರಡು ಪಂದ್ಯಗಳಲ್ಲೂ ಭಾರತ ತಂಡ ಪರಾಭವಗೊಂಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ 1–2 ಗೋಲುಗಳಿಂದ ಸೋತಿದ್ದ ತಂಡ, ಮಸ್ಕತ್‌ನಲ್ಲಿ ಜರುಗಿದ್ದ ಮತ್ತೊಂದು ಹಣಾಹಣಿಯಲ್ಲಿ 0–4 ಗೋಲುಗಳಿಂದ ನಿರಾಸೆ ಕಂಡಿತ್ತು.

‘ಒಮನ್‌, ಬಲಿಷ್ಠ ತಂಡ. ಆ ತಂಡವನ್ನು ಮಣಿಸಿದರೆ ನಮ್ಮ ಆಟಗಾರರ ಮನೋಬಲ ಹೆಚ್ಚಲಿದೆ. ಮೂರು ವರ್ಷಗಳ ಹಿಂದೆ ನಡೆದಿದ್ದ ಎರಡು ಪಂದ್ಯಗಳಲ್ಲಿ ನಾವು ಸೋತಿದ್ದೆವು. ಅದು ಮುಗಿದ ಅಧ್ಯಾಯ. ಈ ಪಂದ್ಯದಲ್ಲಿ ಗೆಲ್ಲಲು ತಂಡದಲ್ಲಿರುವ ಎಲ್ಲಾ ಆಟಗಾರರು ಶಕ್ತಿ ಮೀರಿ ಪ್ರಯತ್ನಿಸಲಿದ್ದಾರೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.