
ಪಿಟಿಐ
ನವದೆಹಲಿ: ಭಾರತ 17 ವರ್ಷದೊಳಗಿನ ಯುವಕರ ತಂಡ, ಇದೇ ತಿಂಗಳ 8 ಮತ್ತು 10ರಂದು ನಡೆಯುವ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ಚೀನಾದ 17 ವರ್ಷದೊಳಗಿನವರ ತಂಡವನ್ನು ಎದುರಿಸಲಿದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಭಾನುವಾರ ತಿಳಿಸಿದೆ.
ವಾರದ ಹಿಂದೆ ಸ್ಯಾಫ್ 17 ವರ್ಷದೊಳಗಿನವರ ಟೂರ್ನಿಯ ಚಾಂಪಿಯನ್ ಆಗಿದ್ದ ಬಿಬಿಯಾನೊ ಫೆರ್ನಾಡಿಸ್ ಗರಡಿಯಲ್ಲಿರುವ ಭಾರತ ತಂಡ ಗೋವಾದಲ್ಲಿ ತರಬೇತಿ ಪಡೆದಿದೆ. ತಂಡ ಸೋಮವಾರ ಸಂಜೆ ಚೀನಾ ತಲುಪಲಿದೆ. ಎರಡೂ ಪಂದ್ಯಗಳು, ಬೀಜಿಂಗ್‌ನಿಂದ 80 ಕಿ.ಮೀ. ದೂರದ ಷಿಯಾಂಗ್‌ಹೇನಲ್ಲಿ ನಡೆಯಲಿದೆ.
ಈ ಪಂದ್ಯಗಳು, ಭಾರತಕ್ಕೆ ನವೆಂಬರ್‌ನಲ್ಲಿ ಅಹಮದಾಬಾದಿನಲ್ಲಿ ನಡೆಯಲಿರುವ ಎಎಫ್‌ಸಿ 17 ವರ್ಷದೊಳಗಿನ ಏಷ್ಯನ್ ಕಪ್ 2026ರ ಕ್ವಾಲಿಫೈಯರ್ಸ್‌ಗೆ ಸಿದ್ಧತೆಯ ಭಾಗವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.