
ಪೋಖರಾ (ನೇಪಾಳ): ಭಾರತ ತಂಡವು ಸ್ಯಾಫ್ (ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್) 19 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಆತಿಥೇಯ ನೇಪಾಳ ವಿರುದ್ಧ ಅಭಿಯಾನ ಆರಂಭಿಸಲಿದೆ.
ಪೋಖರಾ ರಂಗಶಾಲಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಟೂರ್ನಿಯಲ್ಲಿ ಭಾರತ 17 ವರ್ಷದೊಳಗಿನ ಬಾಲಕಿಯರ ತಂಡವನ್ನು ಕಣಕ್ಕಿಳಿಸುತ್ತಿದೆ.
ಎಎಫ್‌ಸಿ 17 ವರ್ಷದೊಳಗಿನ ಬಾಲಕಿಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯು ಮುಂಬರುವ ಏಪ್ರಿಲ್–ಮೇನಲ್ಲಿ ಚೀನಾದಲ್ಲಿ ನಡೆಯಲಿದೆ. ಟೂರ್ನಿಯ ಸಿದ್ಧತೆಯ ಭಾಗವಾಗಿ ಭಾರತ ತಂಡವು ಈ ಕಾರ್ಯತಂತ್ರ ರೂಪಿಸಿದೆ.
ರೌಂಡ್–ರಾಬಿನ್ ಮಾದರಿಯಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ತಂಡಗಳು (ಭಾರತ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ) ಭಾಗವಹಿಸುತ್ತಿವೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಫೆ.7ರಂದು ನಡೆಯುವ ಫೈನಲ್‌ನಲ್ಲಿ ಸೆಣಸಲಿವೆ.
2025ನೇ ಸಾಲಿನ ಸ್ಯಾಫ್ 17 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ಚಾಂಪಿಯನ್‌ಷಿಪ್ ವಿಜೇತ ತಂಡದ ನಾಯಕಿ ಜೂಲನ್ ನಾಂಗಮೈಥೆಮ್ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.