(ಸಂಗ್ರಹ ಚಿತ್ರ)
ಹೈದರಾಬಾದ್: ಮಾಜಿ ಅಂತರರಾಷ್ಟ್ರೀಯ ತಾರೆ ಸುನೀಲ್ ಚೆಟ್ರಿ ಅವರು ಈ ಋತುವಿನ ಹತ್ತನೇ ಗೋಲನ್ನು ಗಳಿಸಿದರು. ಈ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡ ಶನಿವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 1–1 ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿ ಆಯಿತು.
ದೇವೇಂದ್ರ ಮುರಗಾಂವಕರ್ 21ನೇ ನಿಮಿಷ ಆತಿಥೇಯ ತಂಡಕ್ಕೆ ಮುನ್ನಡೆ ಒದಗಿಸಿದರು. 78ನೇ ನಿಮಿಷ ಚೆಟ್ರಿ ಅವರ ಗೋಲು ಬಿಎಫ್‌ಸಿಗೆ ಒಂದು ಪಾಯಿಂಟ್ ಪಡೆಯಲು ನೆರವಾಯಿತು.
40 ವರ್ಷ ವಯಸ್ಸಿನ ಚೆಟ್ರಿ ಐಎಸ್‌ಎಲ್‌ನ ಒಂದೇ ಋತುವಿನಲ್ಲಿ ಎರಡನೇ ಬಾರಿ ಹತ್ತು ಅಥವಾ ಹೆಚ್ಚು ಗೋಲು ಹೊಡೆದಂತಾಗಿದೆ. 2017–18ರಲ್ಲಿ ಅವರು 14 ಗೋಲುಗಳನ್ನು ಗಳಿಸಿದ್ದರು. ವಿರಾಮದ ನಂತರ ಬಿಎಫ್‌ಸಿ ನಾಲ್ಕು ಬದಲಾವಣೆಗಳನ್ನು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.