ADVERTISEMENT

ಬೆಂಗಳೂರು ಫುಟ್ಬಾಲ್‌ ಕ್ಲಬ್‌ಗೆ ಲಿಂಗ್ಡೊ ಬಲ

ಪಿಟಿಐ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
ಯುಜಿನ್‌ಸನ್‌ ಲಿಂಗ್ಡೊ
ಯುಜಿನ್‌ಸನ್‌ ಲಿಂಗ್ಡೊ   

ಬೆಂಗಳೂರು: ಎರಡು ಋತುಗಳನ್ನು ಎಟಿಕೆ ತಂಡದೊಂದಿಗೆ ಆಡಿದ ಫುಟ್‌ಬಾಲ್‌ ಆಟಗಾರ ಯುಜಿನ್‌ಸನ್‌ ಲಿಂಗ್ಡೊ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ)ತಂಡಕ್ಕೆ ಮರಳಿದ್ದಾರೆ. ತಂಡದೊಂದಿಗೆ ಒಂದು ವರ್ಷದ ಅವಧಿಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕ್ಲಬ್‌ ಸೋಮವಾರ ಹೇಳಿದೆ.

2017ರಲ್ಲಿ ಅವರು ಕೋಲ್ಕತಾ ಮೂಲದ ಕ್ಲಬ್‌ ಎಟಿಕೆಯೊಂದಿಗೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು.

ಪ್ರಭಸುಖನ್‌ ಸಿಂಗ್‌ ಗಿಲ್‌ ಹಾಗೂ ಸುರೇಶ್‌ ವಾಂಗ್‌ಜಾಮ್‌ ಬಳಿಕ ಈ ಋತುವಿನಲ್ಲಿ ಬೆಂಗಳೂರು ತಂಡದ ಪರ ಸಹಿ ಹಾಕಿದಮೂರನೇ ಭಾರತೀಯ ಆಟಗಾರ ಲಿಂಗ್ಡೊ. ‘ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಬಿಎಫ್‌ಸಿ ತಂಡವನ್ನು ಪ್ರಶಸ್ತಿಗಳತ್ತ ಮುನ್ನಡೆಸಲು ಹೋರಾಡುತ್ತೇನೆ’ ಎಂದು ಲಿಂಗ್ಡೊ ಪ್ರತಿಕ್ರಿಯಿಸಿದರು.

ADVERTISEMENT

ಮೇಘಾಲಯದ ಶಿಲ್ಲಾಂಗ್‌ನ ಲಾಜೊಂಗ್‌ ಹಾಗೂ ರಂಗ್‌ಡ್ಯಾಜಿಡ್‌ ಯುನೈಟೆಡ್‌ ತಂಡ ಪ್ರತಿನಿಧಿಸಿದ್ದ ಬಳಿಕ 2014ರಲ್ಲಿ ಲಿಂಗ್ಡೊ ಬಿಎಫ್‌ಸಿ ಸೇರಿದ್ದರು. ಖ್ಯಾತ ತರಬೇತುದಾರರಾದ ಆ್ಯಶ್ಲೆ ವೆಸ್ಟ್‌ವುಡ್‌ ಹಾಗೂ ಆಲ್ಬರ್ಟ್‌ ರೋಕಾ ನೇತೃತ್ವದಲ್ಲಿ ಆಡಿದ್ದ ಲಿಂಗ್ಡೊ ಹಲವು ನಿರ್ಣಾಯಕ ಗೋಲುಗಳನ್ನು ಬಾರಿಸಿ ಬಿಎಫ್‌ಸಿ ತಂಡ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.