ADVERTISEMENT

ಕೊಚ್ಚಿಯಲ್ಲಿ ಮೆಸ್ಸಿ ನೇತೃತ್ವದಲ್ಲಿ ಪ್ರದರ್ಶನ ಪಂದ್ಯ ಆಡಲಿರುವ ಅರ್ಜೆಂಟೀನಾ ತಂಡ

ಅಕ್ಟೋಬರ್ 14ರಂದು ಪಂದ್ಯ ನಿಗದಿ

ಪಿಟಿಐ
Published 26 ಮಾರ್ಚ್ 2025, 14:29 IST
Last Updated 26 ಮಾರ್ಚ್ 2025, 14:29 IST
ಲಯೊನೆಲ್ ಮೆಸ್ಸಿ
ಎಎಫ್‌ಪಿ ಸಂಗ್ರಹ ಚಿತ್ರ
ಲಯೊನೆಲ್ ಮೆಸ್ಸಿ ಎಎಫ್‌ಪಿ ಸಂಗ್ರಹ ಚಿತ್ರ   

ನವದೆಹಲಿ: ಭಾರತದ ಫುಟ್‌ಬಾಲ್ ಅಭಿಮಾನಿಗಳು, ಲಯೊನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡದ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡ ಈ ವರ್ಷದ ಅಕ್ಟೋಬರ್‌ 14ರಂದು ಕೊಚ್ಚಿಯಲ್ಲಿ ಪ್ರದರ್ಶನ ಪಂದ್ಯ ಆಡಲಿದೆ.

ಅರ್ಜೆಂಟೀನಾ ತಂಡದ ಭೇಟಿಯನ್ನು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಅವರು ಕಳೆದ ನವೆಂಬರ್‌ನಲ್ಲೇ ಪ್ರಕಟಿಸಿದ್ದರು. ಎಚ್‌ಎಸ್‌ಬಿಸಿ ಇಂಡಿಯಾ, ಅರ್ಜೆಂಟೀನಾ ತಂಡದ ಅಧಿಕೃತ ಪಾಲುದಾರನಾಗಿದ್ದು ದೇಶದಲ್ಲಿ ಫುಟ್‌ಬಾಲ್‌ ಪ್ರೋತ್ಸಾಹಕ್ಕೆ ಬೆಂಬಲ ನೀಡಲಿದೆ ಎಂದು ಬುಧವಾರ ಘೋಷಿಸಲಾಯಿತು. 

 ‘ಅರ್ಜೆಂಟೀನಾ ಫುಟ್‌ಬಾಲ್‌ ಫೆಡರೇಷನ್‌  (ಎಎಫ್‌ಎ) ಮತ್ತು ಎಚ್‌ಎಸ್‌ಬಿಸಿ, ಭಾರತ ಮತ್ತು ಸಿಂಗಪುರದಲ್ಲಿ ಒಂದು ವರ್ಷದ ಪಾಲುದಾರಿಕೆಗೆ ಬುಧವಾರ ಸಹಿ ಹಾಕಿವೆ. ಇದರ ಪ್ರಕಾರ 2026ರ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಸ್ಪರ್ಧಾತ್ಮಕ ಋತುವಿಗೆ ಅರ್ಜೆಂಟೀನಾ ಸಹಕಾರ ನೀಡಲಿದೆ’ ಎಂದು ಎಚ್‌ಎಸ್‌ಬಿಸಿ ಪ್ರಕಟಣೆ ತಿಳಿಸಿದೆ.

ADVERTISEMENT

‘ಈ ಪಾಲುದಾರಿಯ ಅನ್ವಯ, ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಒಳಗೊಂಡಂತೆ ಅರ್ಜೆಂಟೀನಾ ರಾಷ್ಟ್ರೀಯ ತಂಡ 2025ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಅಂತರರಾಷ್ಟ್ರೀಯ ಪ್ರದರ್ಶನ ಪಂದ್ಯ ಆಡಲಿದೆ’ ಎಂದು ಪ್ರಕಟಣೆ ತಿಳಿಸಿದೆ.

2011ರಲ್ಲಿ ವೆನೆಜುವೆಲಾ ವಿರುದ್ಧ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೆಸ್ಸಿ ಅವರು ಅರ್ಜೆಂಟೀನಾ ತಂಡದೊಡನೆ ಮೊದಲ ಬಾರಿ ಭಾರತಕ್ಕೆ ಬಂದಿದ್ದರು. ಕೋಲ್ಕತ್ತದ ಸಾಲ್ಟ್‌ ಲೇಕ್‌ನಲ್ಲಿ ನಡೆದ ಪಂದ್ಯವನ್ನು ಅರ್ಜೆಂಟೀನಾ 1–0ಯಿಂದ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.