ADVERTISEMENT

Santosh Trophy: ರಾಜ್ಯ ತಂಡಕ್ಕೆ ನಿಖಿಲ್‌ ನಾಯಕ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 23:58 IST
Last Updated 18 ಡಿಸೆಂಬರ್ 2025, 23:58 IST
ನಿಖಿಲ್‌ ರಾಜ್‌ ಮುರುಗೇಶ್‌
ನಿಖಿಲ್‌ ರಾಜ್‌ ಮುರುಗೇಶ್‌   

ಬೆಂಗಳೂರು: ಬೆಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ತಂಡದ ನಿಖಿಲ್‌ ರಾಜ್‌ ಮುರುಗೇಶ್‌ ಅವರು ‘ಸಂತೋಷ್‌ ಟ್ರೋಫಿ’ಗಾಗಿ ನಡೆಯಲಿರುವ 79ನೇ ಸೀನಿಯರ್ ಪುರುಷರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಟೂರ್ನಿಯು ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಡಿಸೆಂಬರ್‌ 20ರಿಂದ (ಶನಿವಾರ) 24ರ ವರೆಗೆ ನಡೆಯಲಿದೆ.

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಅಸೋಸಿಯೇಶನ್‌ ಗುರುವಾರ ಪ್ರಕಟಿಸಿರುವ ರಾಜ್ಯ ತಂಡ ಹೀಗಿದೆ: 

ಸುಜಯ್‌ ಎಸ್‌., ಸುಬ್ರಹ್ಮಣ್ಯಂ, ಕಿರಣ್‌ ಶರವಣನ್‌, ರಾಜಿಲ್‌ ಸಜಿ, ಅಜಿತ್‌ ಅರಸು, ಅರ್ಜುನ್‌ ಗೌಡ, ಅಬಿ ಎಸ್‌., ಅರವಿಂದ್‌ ಬಾಬು ಜಿ., ಅರುಣ್‌ ಕುಮಾರ್‌ ಡಿ., ಕಾರ್ತಿಕ್‌ ಗೋವಿಂದಸ್ವಾಮಿ, ವಿಶಾಲ್‌ ಆರ್‌., ಮಂಗ್ಲೆಂಥಂಗ್‌ ಸಿಂಗಸಿತ್‌, ಧನುಷ್‌ ಆರ್‌., ಶ್ರೇಯಸ್‌ ಕೆ., ಗಾಡ್ವಿನ್‌ ಜಾಸನ್‌, ಸಿ.ರೋಹನ್‌ ಸಿಂಗ್‌, ಕ್ರಿಸ್ಪಿನ್‌ ಸಿ. ಕ್ಲೀಟಸ್‌, ನಿಖಿಲ್‌ ರಾಜ್‌ ಮುರುಗೇಶ್‌ (ನಾಯಕ), ಮ್ಯಾಕರ್ಟನ್‌ ಲೂಯಿಸ್‌ ಹಾಗೂ ನಿಕ್ಸನ್‌.

ADVERTISEMENT

ಮುಖ್ಯ ಕೋಚ್‌: ರವಿಬಾಬು ರಾಜು, ಸಹಾಯಕ ಕೋಚ್‌: ಸಿ.ಚಂದ್ರಶೇಖರ್‌ ರಾವ್‌, ಮ್ಯಾನೇಜರ್‌: ಬಿ.ಭಟ್ಟಾಚಾರ್‌ಜೀ.

ಕರ್ನಾಟಕ ತಂಡದ ಪಂದ್ಯಗಳು

ದಿನಾಂಕ;ಎದುರಾಳಿ

ಡಿ.20;ಲಕ್ಷದ್ವೀಪ

ಡಿ.22;ಸರ್ವೀಸಸ್‌

ಡಿ.24;ಗೋವಾ

ಎಲ್ಲ ಪಂದ್ಯಗಳು ಮಧ್ಯಾಹ್ನ 3ಕ್ಕೆ ಆರಂಭವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.