ADVERTISEMENT

ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಪಿಟಿಐ
Published 1 ಡಿಸೆಂಬರ್ 2025, 12:39 IST
Last Updated 1 ಡಿಸೆಂಬರ್ 2025, 12:39 IST
<div class="paragraphs"><p>ಲಯೊನೆಲ್ ಮೆಸ್ಸಿ</p></div>

ಲಯೊನೆಲ್ ಮೆಸ್ಸಿ

   

ಹೈದರಾಬಾದ್: ಡಿಸೆಂಬರ್ 13ರಂದು ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಭಾಗವಹಿಸುವ ಸೌಹಾರ್ದ ಪಂದ್ಯಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ಈ ಪಂದ್ಯ ನಡೆಯಲಿದೆ.

ಸಮಾರಂಭದ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ. ಉಪ್ಪಳ ಮೈದಾನದಲ್ಲಿ ಪಂದ್ಯ ನಿಗದಿಯಾಗಿದೆ.

ADVERTISEMENT

ಫುಟ್‌ಬಾಲ್ ಆಟಗಾರರೂ ಆಗಿರುವ ರೇವಂತ್ ರೆಡ್ಡಿ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ. ಭಾನುವಾರ ರಾತ್ರಿ ಕೆಲ ಆಟಗಾರರೊಂದಿಗೆ ಫುಟ್‌ಬಾಲ್ ಆಡಿ ಅವರು ಇದಕ್ಕೆ ತಯಾರಿ ನಡೆಸಿದ್ದಾರೆ. ಕಳೆದ ವರ್ಷ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ರೆಡ್ಡಿ ಫುಟ್‌ಬಾಲ್ ಆಡಿದ್ದರು.

ಎರಡು ವರ್ಷ ತುಂಬಿದ ಸಂಭ್ರಮಾಚರಣೆಯ ಭಾಗವಾಗಿ ಕಾಂಗ್ರೆಸ್ ಸರ್ಕಾರ ಡಿಸೆಂಬರ್ 1ರಿಂದ 13ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ಉದ್ದೇಶಿದ ಭಾರತ್ ಫ್ಯೂಚರ್ ಸಿಟಿಯಲ್ಲಿ ಡಿಸೆಂಬರ್ 8 ಹಾಗೂ 9ರಂದು ನಡೆಯಲಿರುವ ತೆಲಂಗಾಣ ರೈಸಿಂಗ್ ಗ್ಲೋಬಲ್ ಸಮ್ಮಿಟ್‌ಗೆ ಆಹ್ವಾನಿಸಲು ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರೆಡ್ಡಿ ಭೇಟಿಯಾಗಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.