ADVERTISEMENT

Tokyo Olympics | ಮೂವರು ಅಥ್ಲೀಟ್ ಸೇರಿದಂತೆ 24 ಮಂದಿಗೆ ಕೋವಿಡ್

ಪಿಟಿಐ
Published 29 ಜುಲೈ 2021, 9:10 IST
Last Updated 29 ಜುಲೈ 2021, 9:10 IST
ಟೋಕಿಯೊ ಒಲಿಂಪಿಕ್ಸ್
ಟೋಕಿಯೊ ಒಲಿಂಪಿಕ್ಸ್    

ಟೋಕಿಯೊ: ಮೂವರು ಅಥ್ಲೀಟ್‌ಗಳು ಸೇರಿದಂತೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಮತ್ತೆ 24 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ ಇದಾಗಿದೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆಯು 193ಕ್ಕೆ ಏರಿಕೆಯಾಗಿದೆ.

ಟೋಕಿಯೊದಲ್ಲಿ ಕೊರೊನಾವೈರಸ್ಸೋಂಕು ಗಣನೀಯವಾಗಿ ವರ್ಧಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಬುಧವಾರದಂದು 3,177 ಮಂದಿಯಲ್ಲಿ ಸೋಂಕು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.