ಪ್ರಾತಿನಿಧಿಕ ಚಿತ್ರ
ಕಟಕ್: ಸರ್ವಿಸಸ್ ತಂಡವು ಇಲ್ಲಿ ನಡೆದ 71ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನ ರೋಚಕ ಹಣಾಹಣಿಯಲ್ಲಿ ಸರ್ವಿಸಸ್ 30–30 (6–4)ರಿಂದ ರೈಲ್ವೇಸ್ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಪಂದ್ಯ ಸಮಬಲಗೊಂಡು, ಟೈಬ್ರೇಕರ್‌ನಲ್ಲಿ ಸರ್ವಿಸಸ್ ಪಾರಮ್ಯ ಮೆರೆಯಿತು.
ಸೆಮಿಫೈನಲ್‌ನಲ್ಲಿ ಸರ್ವಿಸಸ್ 43–35ರಿಂದ ಪಂಜಾಬ್ ವಿರುದ್ಧ; ರೈಲ್ವೇಸ್ ತಂಡವು 42–34ರಿಂದ ಉತ್ತರ ಪ್ರದೇಶ ವಿರುದ್ಧ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.