ADVERTISEMENT

ಗಾಲ್ಫ್‌: ಅದಿತಿ ನಿರಾಳ

ಪಿಟಿಐ
Published 23 ಮೇ 2020, 19:37 IST
Last Updated 23 ಮೇ 2020, 19:37 IST
ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್
ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್   

ನವದೆಹಲಿ: ಈ ವರ್ಷ ನಡೆಯಬೇಕಿದ್ದ ಮಹಿಳಾ ಪಿಜಿಎ (ಎಲ್‌ಪಿಜಿಎ) ಗಾಲ್ಫ್‌ ಟೂರ್‌ ಅನ್ನು 2021ಕ್ಕೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಕೊರೊನಾ ಪಿಡುಗಿನ ಹಿನ್ನೆಲೆಯಲ್ಲಿ ಈ ಋತುವಿನ ಟೂರ್‌ನಿಂದ ಹೊರಗುಳಿದಿದ್ದ ಎಲ್ಲರಿಗೂ ಅವಕಾಶ ನೀಡಲಾಗಿದ್ದು, ಭಾರತದ ಅದಿತಿ ಅಶೋಕ್ ಕೂಡ‌ ಪ್ರವೇಶ ಗಿಟ್ಟಿಸುತ್ತಿದ್ದಾರೆ.

‘ಎಲ್‌ಪಿಜಿಎದಿಂದ ಇದೊಂದು ಉತ್ತಮ ನಡೆ ಮತ್ತು ಇದು ಅನಿವಾರ್ಯವೂ ಆಗಿತ್ತು’ ಎಂದು ಮೂರು ತಿಂಗಳುಗಳಿಂದ ‘ಗೃಹಬಂಧನ’ದಲ್ಲಿರುವ ಅದಿತಿ ನುಡಿದರು.

ಆಸ್ಟ್ರೇಲಿಯಾದಲ್ಲಿ ನಡೆದ ನ್ಯೂ ಸೌತ್‌ ವೇಲ್ಸ್‌ ಓಪನ್‌, ಅದಿತಿ ಅವರು ಪಾಲ್ಗೊಂಡಿದ್ದ ಕೊನೆಯ ಟೂರ್ನಿಯಾಗಿದೆ. ಇಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಅಮೆರಿಕಾಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಜಾರಿಗೊಂಡು ಅವರು ಭಾರತದಲ್ಲೇ ಉಳಿದುಕೊಳ್ಳುವಂತಾಯಿತು. ಆ ಬಳಿಕ ಟೂರ್ನಿ ರದ್ದಾದ ಸುದ್ದಿ ಪ್ರಕಟವಾಯಿತು. ಭಾರತ ಬಿಡುವ ಮುಂಚೆಯೇ ಈ ಸಮಾಚಾರ ತಲುಪಿದ್ದರಿಂದ ಅವರು ನಿಟ್ಟುಸಿರುಬಿಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.