ADVERTISEMENT

ಕೋವಿಡ್–19 ಭೀತಿ: ಟೋಕಿಯೊ ಮ್ಯಾರಥಾನ್ ರದ್ದು

ಏಜೆನ್ಸೀಸ್
Published 17 ಫೆಬ್ರುವರಿ 2020, 19:45 IST
Last Updated 17 ಫೆಬ್ರುವರಿ 2020, 19:45 IST

ಟೋಕಿಯೊ: ಚೀನಾದಲ್ಲಿ ನೂರಾರು ಮಂದಿಯ ಪ್ರಾಣಕ್ಕೆ ಕುತ್ತು ತಂದಿರುವ ಕೋವಿಡ್ –19 ವೈರಸ್ ಹರಡುವ ಭೀತಿಯಿಂದಾಗಿ ಜಪಾನ್‌ನಲ್ಲಿ ಟೋಕಿಯೊ ಮ್ಯಾರಥಾನ್ ರದ್ದುಗೊಳಿಸಲು ಸಂಘಟಕರು ನಿರ್ಣಯಿಸಿದ್ದಾರೆ. ಇದರಿಂದಾಗಿ 38 ಸಾವಿರ ಓಟಗಾರರು ನಿರಾಸೆಗೊಂಡಿದ್ದಾರೆ.

‘ಟೋಕಿಯೊದಲ್ಲಿ ಅನೇಕರಿಗೆ ಕೋವಿಡ್–19 ವೈರಸ್ ಸೋಂಕು ತಗುಲಿರುವುದು ಖಾತರಿಯಾಗಿದೆ. ಆದ್ದರಿಂದ ಮ್ಯಾರಥಾನ್ ನಡೆಸದೇ ಇರುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ. ಗಾಲಿಕುರ್ಚಿ ಓಟಗಾರರನ್ನು ಒಳಗೊಂಡಎಲೈಟ್ ಗುಂಪಿನ ಸ್ಪರ್ಧೆಗಳು ನಿಗದಿಯಂತೆ ನಡೆಯಲಿವೆ’ ಎಂದು ಟೋಕೊಯೊ ಮ್ಯಾರಥಾನ್ ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್ ಒಂದರಂದು ಮ್ಯಾರಥಾನ್ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವೈರಸ್ ಸೋಂಕು ಇನ್ನಷ್ಟು ಹರಡುವ ಆತಂಕವಿದೆ ಎಂದು ಜಪಾನ್ ಸರ್ಕಾರ ಎಚ್ಚರಿಕೆ ನೀಡಿತ್ತು. ಜನಸಂದಣಿಯಿಂದ ದೂರ ಇರುವಂತೆ ಆರೋಗ್ಯ ಸಚಿವರು ಭಾನುವಾರ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಘಟಕರು ಎಚ್ಚೆತ್ತುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.