ವೇಟ್‌ಲಿಫ್ಟಿಂಗ್
ಪ್ರಾತಿನಿಧಿಕ ಚಿತ್ರ
ನವದೆಹಲಿ: ಬಹರೇನ್‌ನ ಮನಾಮಾದಲ್ಲಿ ಇದೇ 22 ರಿಂದ 31ರವರೆಗೆ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಕ್ರೀಡಾಕೂಟದಲ್ಲಿ 222 ಮಂದಿಯ ಭಾರತ ಅಥ್ಲೀಟುಗಳ ತಂಡ ಭಾಗವಹಿಸಲಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ.
21 ವಿವಿಧ ಪದಕ ಸ್ಪರ್ಧೆಗಳಲ್ಲಿ ಭಾರತ ತಂಡ ಭಾಗವಹಿಸಲಿದೆ. ತಂಡದಲ್ಲಿ 119 ಮಂದಿ ಮಹಿಳಾ ಅಥ್ಲೀಟುಗಳು, 103 ಮಂದಿ ಪುರುಷ ಅಥ್ಲೀಟುಗಳು ಇದ್ದಾರೆ. 90 ಮಂದಿ ತರಬೇತುದಾರರು, ಅಧಿಕಾರಿಗಳು ಸೇರಿದಂತೆ ಭಾರತದ ಪಾಳೆಯದ ಸಂಖ್ಯೆ 312 ಆಗಲಿದೆ.
ಭಾರತ ತಂಡದಲ್ಲಿ 31 ಅಥ್ಲೀಟುಗಳು, 14 ಬಾಕ್ಸರ್‌ಗಳು, 28 ಮಂದಿ ಕಬಡ್ಡಿ ಪಟುಗಳು ಒಳಗೊಂಡಿದ್ದಾರೆ. ಈಜು, ಜೂಡೊ, ವೇಟ್‌ಲಿಫ್ಟಿಂಗ್, ಕುಸ್ತಿ, ಬ್ಯಾಡ್ಮಿಂಟನ್‌ನಲ್ಲೂ ಭಾರತದ ಕ್ರೀಡಾಪಟುಗಳು ಪಾಲ್ಗೊಳಲಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್ ಅವರು ತಂಡದ ಷೆಫ್–ಡಿ– ಮಿಷನ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.