ADVERTISEMENT

Australian Open Badminton: ಸೆಮೀಸ್‌ಗೆ ಲಕ್ಷ್ಯ; ಸಾತ್ವಿಕ್-ಚಿರಾಗ್ ನಿರ್ಗಮನ

ಪಿಟಿಐ
Published 21 ನವೆಂಬರ್ 2025, 10:02 IST
Last Updated 21 ನವೆಂಬರ್ 2025, 10:02 IST
<div class="paragraphs"><p>ಲಕ್ಷ್ಯ ಸೇನ್</p></div>

ಲಕ್ಷ್ಯ ಸೇನ್

   

(ಪಿಟಿಐ ಚಿತ್ರ)

ಸಿಡ್ನಿ: ಆಸ್ಟ್ರೇಲಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ADVERTISEMENT

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಏಳನೇ ಶ್ರೇಯಾಂಕಿತರಾದ ಲಕ್ಷ್ಯ, ಭಾರತದವರೇ ಆದ 20 ವರ್ಷದ ಆಯುಷ್ ಶೆಟ್ಟಿ ವಿರುದ್ಧ 23-21, 21-11ರ ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ಈ ನಡುವೆ ಪುರುಷರ ಡಬಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಾತ್ವಿಕ್ ಸಾಯಿ‌ರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎಂಟರ ಘಟ್ಟದಲ್ಲಿ ಎಡವಿದ್ದಾರೆ.

ಸಾತ್ವಿಕ್-ಚಿರಾಗ್ ಜೋಡಿಯು ಐದನೇ ಶ್ರೇಯಾಂಕದ ಇಂಡೋನೇಷ್ಯಾದ ಫಜರ್ ಅಲ್ಫಿಯನ್ ಹಾಗೂ ಮುಹಮ್ಮದ್ ಶೋಹಿಬುರ್ ಫಿಕ್ರಿ ವಿರುದ್ಧ 21-19 21-15ರ ಅಂತರದಲ್ಲಿ ಮಣಿದು ಕೂಟದಿಂದಲೇ ನಿರ್ಗಮಿಸಿದ್ದಾರೆ.

ಹಾಂಕಾಂಗ್ ಓಪನ್ ಮತ್ತು ಚೀನಾ ಮಾಸ್ಟರ್ಸ್ ಟೂರ್ನಿಗಳಲ್ಲಿ ಸಾತ್ವಿಕ್-ಚಿರಾಗ್ ಜೋಡಿಯು ಫೈನಲ್‌ಗೆ ಪ್ರವೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.