ADVERTISEMENT

ಆಸ್ಟ್ರಿಯಾ | ಸಿಂಗಲ್ಸ್‌ ಮಾತ್ರ; ಹಸ್ತಲಾಘವ ಇಲ್ಲ

ರಾಯಿಟರ್ಸ್
Published 3 ಮೇ 2020, 19:25 IST
Last Updated 3 ಮೇ 2020, 19:25 IST

ವಿಯೆನ್ನಾ, ಆಸ್ಟ್ರಿಯಾ: ಆಸ್ಟ್ರಿಯಾದಲ್ಲಿ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ತೆರವುಗೊಳಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಸರ್ಕಾರದ ಮಾರ್ಗಸೂಚಿಗಳ ಅನ್ವಯ ಟೆನಿಸ್‌ ಆರಂಭವಾಗಲಿದ್ದು, ಸಿಂಗಲ್ಸ್‌ ಪಂದ್ಯಗಳನ್ನು ಮಾತ್ರ ಆಡಿಸಲಾಗುತ್ತದೆ. ಒಬ್ಬರು ಇನ್ನೊಬ್ಬರ ಟೆನಿಸ್‌ ಬಾಲ್‌ಗಳನ್ನು ಸ್ಪರ್ಶಿಸುವಂತಿಲ್ಲ; ಹಸ್ತಲಾಘವ ಕೂಡ ಇರುವುದಿಲ್ಲ.

ಅಂತರ ಕಾಯ್ದುಕೊಂಡು ಆಡಬಹುದಾದ ಆಟಗಳಲ್ಲಿ ಟೆನಿಸ್‌ ಕೂಡ ಒಂದು. ಆಸ್ಟ್ರಿಯಾ ಸರ್ಕಾರ ಮೇ 1ರಿಂದ ಸೀಮಿತ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ. ಗಾಲ್ಫ್‌, ಕುದುರೆ ಸವಾರಿ, ಆರ್ಚರಿ, ಶೂಟಿಂಗ್ ಸ್ಪರ್ಧೆಗಳಿಗೆ ಅನುಮತಿ ನೀಡಲಾಗಿದೆ.

‘ಕೆಲವು ಕ್ರೀಡೆಗಳನ್ನು ಆರಂಭಿಸಲಾಗುವುದು’ ಎಂದು ವಿಯೆನ್ನಾದ ಕ್ರೀಡಾ ಸಚಿವ ವೆರ್ಣೆರ್‌ ಕೊಗ್ಲರ್,‌ ಹೋದ ತಿಂಗಳು ಹೇಳಿದ್ದರು. ‘ಸೋಂಕು ಹರಡದಂತೆ ತಡೆಯಲು ಅನುಸರಿಸಬೇಕಾದ ನಿಯಮಗಳನ್ನು ಫೆಡರೇಷನ್‌ಗಳು ನಿರ್ಧರಿಸಲಿವೆ’ ಎಂದು ಅವರು ನುಡಿದಿದ್ದರು.

ADVERTISEMENT

‘ಹೊಸ ನಿಯಮಗಳನ್ನು ಆಟಗಾರರು ಪಾಲಿಸಲೇಬೇಕು. ಅದರ ಕಡೆಗೆ ನಮ್ಮ ಗಮನವೂ ಇರುತ್ತದೆ. ಶಿಶ್ತು ಕಾಯ್ದುಕೊಳ್ಳಬೇಕು. ಯಾವುದೇ ಅಪಾಯ ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಆಟವಾಡಿದ ಖುಷಿ ಮುಖ್ಯ. ಅಭಿಮಾನಿಗಳು ಡಬಲ್ಸ್‌ ಪಂದ್ಯಗಳ ವೀಕ್ಷಣೆಯಿಂದ ವಂಚಿತರಾಗಲಿದ್ದಾರೆ’ ಎಂದು ಸ್ಮ್ಯಾಶಿಂಗ್‌ ಸನ್‌ ಟೆನಿಸ್‌ ಕ್ಲಬ್‌ನ ಸಹ ಸ್ಥಾಪಕ ಡೈಟರ್‌ ಮೊಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.