ADVERTISEMENT

ಜವಾರೆ ಎಸ್‌ ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಫಿನ್‌ಬಾಸ್‌ಗೆ ಡರ್ಬಿ ಕಿರೀಟ

ಡಿ.ರವಿ ಕುಮಾರ್
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
<div class="paragraphs"><p>ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಎಸ್. ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ ಕಾರ್ಯಕ್ರಮದಲ್ಲಿ ಜವಾರೆ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ ಗೆದ್ದ ಫಿನ್‌ಬಾಸ್‌ ಕುದುರೆ ಮಾಲೀಕರಾದ ಖುಷ್ರೂ ಎನ್. ಧುಂಜಿಭಾಯ್ ಮತ್ತು ಅನಸೂಯಾ ಅವರಿಗೆ ಡರ್ಬಿ ಪ್ರಾಯೋಜಕರಾದ ಜವಾರೆ ಎಸ್‌. ಪೂನಾವಾಲ ಅವರು ಪ್ರಶಸ್ತಿ ಪ್ರದಾನ ಮಾಡಿದರು.&nbsp; </p></div>

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಎಸ್. ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ ಕಾರ್ಯಕ್ರಮದಲ್ಲಿ ಜವಾರೆ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ ಗೆದ್ದ ಫಿನ್‌ಬಾಸ್‌ ಕುದುರೆ ಮಾಲೀಕರಾದ ಖುಷ್ರೂ ಎನ್. ಧುಂಜಿಭಾಯ್ ಮತ್ತು ಅನಸೂಯಾ ಅವರಿಗೆ ಡರ್ಬಿ ಪ್ರಾಯೋಜಕರಾದ ಜವಾರೆ ಎಸ್‌. ಪೂನಾವಾಲ ಅವರು ಪ್ರಶಸ್ತಿ ಪ್ರದಾನ ಮಾಡಿದರು. 

   

–ಪ್ರಜಾವಾಣಿ ಚಿತ್ರ: ರಂಜು ಪಿ

ಬೆಂಗಳೂರು: ಪೆಸಿ ಶ್ರಾಫ್‌ ತರಬೇತಿಯಲ್ಲಿ ಪಳಗಿರುವ ‘ಫಿನ್‌ಬಾಸ್‌’ ಕುದುರೆಯು ಭಾನುವಾರ ನಡೆದ ‘ಜವಾರೆ ಎಸ್‌. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ’ ಗೆದ್ದುಕೊಂಡಿತು. ಈ ವಿಜಯದೊಂದಿಗೆ ತನ್ನ ಮಾಲೀಕರಿಗೆ ಸುಮಾರು ₹1.22 ಕೋಟಿ ಬಹುಮಾನ ಮತ್ತು ₹3 ಲಕ್ಷದ ಮೌಲ್ಯದ ಆಕರ್ಷಕ ಟ್ರೋಫಿ ದೊರಕಿಸಿಕೊಟ್ಟಿತು.

ADVERTISEMENT

ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ನಡೆದ ಪ್ರತಿಷ್ಠಿತ ಬೇಸಿಗೆ ಡರ್ಬಿ, ರೇಸ್‌ಪ್ರಿಯರಿಗೆ ರಸದೌತಣ ಉಣಬಡಿಸಿತು. ಡರ್ಬಿ ದಿನದಲ್ಲಿ ನಡೆದ ಎಂಟು ರೇಸ್‌ಗಳನ್ನೂ ನೋಡಿ ಸಂಭ್ರಮಿಸಿದರು.

ಹದಿನಾರು ಸ್ಫರ್ಧಿ ಭಾಗವಹಿಸಿದ್ದ ಡರ್ಬಿಯಲ್ಲಿ ಫಿನ್‌ಬಾಸ್‌ ‘ಫೇವರಿಟ್‌’ ಆಗಿತ್ತು. ರೇಸ್‌ನ ಯಾವುದೇ ಕ್ಷಣದಲ್ಲೂ ತನ್ನ ಬೆಂಬಲಿಗರಿಗೆ ಮೂರು ವರ್ಷದ ಹೆಣ್ಣು ಕುದುರೆ ಆತಂಕ ಉಂಟು ಮಾಡಲಿಲ್ಲ. ಆರಂಭದಲ್ಲಿ ಹತ್ತನೇ ಸ್ಥಾನದಲ್ಲಿದ್ದರೂ, ಕ್ರಮೇಣವಾಗಿ ತನ್ನ ಸ್ಥಾನವನ್ನು ಉತ್ತಮಗೊಳಿಸುತ್ತಲೇ ಸಾಗಿತು.

ಕೊನೆಯ 500 ಮೀಟರ್ಸ್‌ ತಿರುವಿನ ಮೊದಲೇ ಎರಡನೇ ಸ್ಥಾನದಲ್ಲಿ ಓಡುತ್ತಿದ್ದ ಪ್ರೋಕೊಫಿವ್‌ ಮುನ್ನುಗ್ಗಿ ಲೀಡ್‌ ಪಡೆಯಿತು. ಅದೇ ಕ್ಷಣದಲ್ಲಿ ಆರನೇ ಸ್ಥಾನದಲ್ಲಿದ್ದ ಫಿನ್‌ಬಾಸ್‌ ತನ್ನ ವೇಗವನ್ನು ಇಮ್ಮಡಿಗೊಳಿಸಿ ಮುನ್ನೆಲೆಗೆ ಬಂದಿತು. 200 ಮೀಟರ್ಸ್‌ ದೂರದ ತನಕ ಪ್ರೋಕೊಫಿವ್‌ ಲೀಡ್‌ ಬಿಟ್ಟುಕೊಡದೆ ಹೋರಾಟ ನಡೆಸಿತು. ಆದರೆ, ಆತ್ಮವಿಶ್ವಾಸದಿಂದ ಸವಾರಿ ಮಾಡಿದ ಟ್ರೆವರ್‌ ಪಟೇಲ್‌ ಕೊನೆಯ 150 ಮೀಟರ್ಸ್‌ ಇರುವಂತೆಯೆ ಫಿನ್‌ಬಾಸ್‌ ಅನ್ನು ಮುನ್ನುಗ್ಗಿಸಿ ಡರ್ಬಿಯನ್ನು ಮೂರೂವರೆ ಲೆಂಗ್ತ್‌ಗಳಿಂದ ಗೆಲ್ಲುವಂತೆ ನೋಡಿಕೊಂಡರು.

ಪ್ರೋಕೊಫಿವ್‌ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮಿರಾಕಲ್‌ ಸ್ಟಾರ್‌ ಕೊನೆಯ ಘಳಿಗೆಯಲ್ಲಿ ಉತ್ತಮವಾಗಿ ಓಡಿ ಬಂದು ರೆಡ್‌ ಬಿಷಪ್‌ ಅನ್ನು ನಾಲ್ಕನೇ ಸ್ಥಾನಕ್ಕೆ ಹಿಂದೂಡಿ ಮೂರನೇ ಸ್ಥಾನ ಪಡೆಯಿತು. 2000 ಮೀಟರ್ಸ್‌ ದೂರದ ಡರ್ಬಿ ಗೆಲ್ಲಲು ಫಿನ್‌ಬಾಸ್‌ 2 ನಿಮಿಷ 03.28 ಸೆಕೆಂಡ್ಸ್‌ ತೆಗೆದುಕೊಂಡಿತು.

9000ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ರೇಸ್‌ಪ್ರಿಯರು ರೇಸ್‌ನ ಸುಂದರ ಕ್ಷಣದಲ್ಲಿ ಕಣ್ತುಂಬಿಕೊಂಡರು.  

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿಯಲ್ಲಿ  ಫಿನ್‌ಬಾಸ್‌ ಗೆಲುವಿನ ವೈಖರಿ –ಪ್ರಜಾವಾಣಿ ಚಿತ್ರ: ರಂಜು ಪಿ
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿಯಲ್ಲಿ ಭಾಗವಹಿಸಿದ್ದ ಕುದುರೆಗಳು –ಪ್ರಜಾವಾಣಿ ಚಿತ್ರ: ರಂಜು ಪಿ
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ ವೀಕ್ಷಿಸಲು ಸೇರಿದ್ದ ರೇಸ್‌ ಅಭಿಮಾನಿಗಳು ಪ್ರಜಾವಾಣಿ ಚಿತ್ರ: ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.