ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಟಾರ್ಪಿಡೋಸ್ ತಂಡವು ಪ್ರೈಮ್ ವಾಲಿಬಾಲ್ ಲೀಗ್‌ನ ಮೂರನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಹಮದಾಬಾದ್ ಡಿಫೆಂಡರ್ಸ್ ವಿರುದ್ಧ ಗೆಲುವು ಸಾಧಿಸಿತು.
ಚೆನ್ನೈನ ಜವಾಹರ್‌ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 17-15, 15-13, 15-13 ರಿಂದ ಡಿಫೆಂಡರ್ಸ್ ತಂಡವನ್ನು ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿತು. ಈ ಮೂಲಕ ಹಿಂದಿನ ಪಂದ್ಯದ ಸೋಲಿಗೆ ಮುಯ್ಯಿಯನ್ನು ಟಾರ್ಪಿಡೋಸ್ ತೀರಿಸಿಕೊಂಡಿತು.
ಟಾರ್ಪಿಡೋಸ್ ಪರ ಮಿಂಚಿದ್ದ ಥಾಮಸ್ ಹೆಪ್ಟಿನ್‌ಸ್ಟಾಲ್ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ಅಹಮದಾಬಾದ್ ತಂಡದ ಆಟಗಾರರರು ಎಸಗಿದ ಲೋಪ ಬೆಂಗಳೂರು ತಂಡಕ್ಕೆ ವರವಾಯಿತು. ತಂಡದ ಮುತ್ತುಸ್ವಾಮಿ ತಂತ್ರ ಫಲ ನೀಡಿದರೆ, ಮುಜೀಬ್ ಅದ್ಭುತ ಬ್ಲಾಕ್‌ಗಳ ಮೂಲಕ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.