ಚೆನ್ನೈ: ಚೆಸ್ ಕ್ರೀಡೆಯನ್ನು 2022ರ ಏಷ್ಯನ್ ಗೇಮ್ಸ್‌ನಲ್ಲಿ ಸೇರ್ಪಡೆ ಮಾಡಿರುವುದನ್ನು ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಸ್ವಾಗತಿಸಿದ್ದಾರೆ.
‘ಇದೊಂದು ಸಂತಸದ ಸುದ್ದಿ. ಚೆಸ್ ಕ್ರೀಡೆಯ ಬೆಳವಣಿಗೆಗೆ ಇದ ರಿಂದ ಬಹಳ ದೊಡ್ಡ ನೆರವು ಸಿಗ ಲಿದೆ. ಭಾರತದ ಆಟಗಾರರು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ಬರಲಿದ್ದಾರೆ’ ಎಂದು ಆನಂದ್ ಹೇಳಿದ್ದಾರೆ.
ಚೀನಾದ ಹಾಂಗ್ಜುನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ.
2006 ರ ದೋಹಾ ಏಷ್ಯನ್ ಗೇಮ್ಸ್ ಮತ್ತು 2010ರಲ್ಲಿ ಗುಂವಾಗ್ಹು ಏಷ್ಯನ್ ಗೇಮ್ಸ್‌ನಲ್ಲಿ ಚೆಸ್ ಕ್ರೀಡೆಯನ್ನು ಆಡಿಸಲಾಗಿತ್ತು. ದೋಹಾ ಕೂಟದಲ್ಲಿ ಭಾರತದ ಇಬ್ಬರು ಆಟಗಾರರು ಪದಕ ಗೆದ್ದಿ ದ್ದರು. ಮಹಿಳೆಯರ ವೈಯಕ್ತಿಕ ರ‍್ಯಾಪಿಡ್ ಚೆಸ್‌ನಲ್ಲಿ ಭಾರತದ ಕೊನೆರು ಹಂಪಿ ಚಿನ್ನ ಗೆದ್ದಿದ್ದರು. 2010ರಲ್ಲಿ ಪುರುಷರ ತಂಡ ವಿಭಾಗದಲ್ಲಿ ಭಾರತ ತಂಡ ಮತ್ತು ಮಹೀಳೆಯರ ವೈಯಕ್ತಿಕ ವಿಭಾಗದಲ್ಲಿ ಡಿ. ಹರಿಕಾ ಕಂಚಿನ ಪದಕ ಗೆದ್ದಿದ್ದರು. ಕಳೆದ ಎರಡು ಕೂಟಗಳಲ್ಲಿ ಚೆಸ್ ಕ್ರೀಡೆಯನ್ನು ಕೈಬಿಡಲಾಗಿತ್ತು. ಗ್ರ್ಯಾಂಡ್ ಮಾಸ್ಟರ್ ಭಾಸ್ಕರನ್ ಅಧಿಬನ್, ಅಖಿಲ ಭಾರತ ಚೆಸ್ ಫೆಡರೇಷನ್ ಉಪಾಧ್ಯಕ್ಷ ಡಿ.ವಿ. ಸುಂದರ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.