ADVERTISEMENT

ಫಿಡೆ ವಿಶ್ವಕಪ್‌: ದಿವ್ಯಾ ದೇಶಮುಖ್‌ಗೆ ವೈಲ್ಡ್‌ಕಾರ್ಡ್

ಪಿಟಿಐ
Published 22 ಸೆಪ್ಟೆಂಬರ್ 2025, 23:45 IST
Last Updated 22 ಸೆಪ್ಟೆಂಬರ್ 2025, 23:45 IST
<div class="paragraphs"><p>ದಿವ್ಯಾ ದೇಶಮುಖ್‌</p></div>

ದಿವ್ಯಾ ದೇಶಮುಖ್‌

   

(ಪಿಟಿಐ ಚಿತ್ರ)

ನವದೆಹಲಿ: ಫಿಡೆ ಮಹಿಳಾ ವಿಶ್ವಕಪ್ ವಿಜೇತೆ ಗ್ರ್ಯಾಂಡ್ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಗೋವಾದಲ್ಲಿ ನಡೆಯಲಿರುವ 2025ರ ಆವೃತ್ತಿಯ ಫಿಡೆ ವಿಶ್ವಕಪ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದಾರೆ.

ADVERTISEMENT

ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 31ರಿಂದ ನವೆಂಬರ್ 27ರ ತನಕ ನಡೆಯಲಿದೆ. ಒಬ್ಬ ಸ್ಪರ್ಧಿಯು ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಕಾರಣ 19 ವರ್ಷದ ದಿವ್ಯಾ ಅವರಿಗೆ ಅವಕಾಶ ದೊರಕಿದೆ.

ಫಿಡೆ ವಿಶ್ವಕಪ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ವಿಶ್ವದ 206 ಚೆಸ್‌ಪಟುಗಳು ಕಣಕ್ಕೆ ಇಳಿಯಲಿದ್ದಾರೆ. 20 ಆಟಗಾರರನ್ನು ಒಳಗೊಂಡ ಭಾರತ ಸವಾವನ್ನು ವಿಶ್ವ ಚಾಂಪಿಯನ್ ಡಿ. ಗುಕೇಶ್ ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.