ADVERTISEMENT

ಫಿಡೆ ಗ್ರ್ಯಾಂಡ್ ಸ್ವಿಸ್ ಮಹಿಳಾ ಚೆಸ್: ಜಂಟಿ ಅಗ್ರಸ್ಥಾನಕ್ಕೆ ಭಾರತದ ವೈಶಾಲಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:50 IST
Last Updated 15 ಸೆಪ್ಟೆಂಬರ್ 2025, 4:50 IST
ಚೆಸ್
ಚೆಸ್   

ಐಲ್ ಆಫ್ ಮ್ಯಾನ್: ಭಾರತದ ಆರ್.ವೈಶಾಲಿ ಅವರು ಫಿಡೆ ಗ್ರ್ಯಾಂಡ್ ಸ್ವಿಸ್ ಮಹಿಳಾ ಚೆಸ್ ಟೂರ್ನಿಯ ಹತ್ತನೇ ಸುತ್ತಿನಲ್ಲಿ ಉಕ್ರೇನ್‌ನ ಮರಿಯಾ ಮುಝಿಚುಕ್ ಅವರನ್ನು ಮಣಿಸಿದರು. ಇದರೊಡನೆ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ಜೊತೆ ಭಾನುವಾರದ ಕೊನೆಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಇಬ್ಬರೂ ತಲಾ 7.5 ಅಂಕ ಗಳಿಸಿದ್ದಾರೆ. ಇನ್ನೊಂದು ಸುತ್ತಿನ ಆಟವಷ್ಟೇ ಉಳಿದಿದೆ.

ಓಪನ್ ವಿಭಾಗದಲ್ಲಿ ಐವರು ಮುನ್ನಡೆ ಹಂಚಿಕೊಂಡಿದ್ದಾರೆ. ಅಲಿರೇಜಾ ಫಿರೋಜ್, ಅನಿಶ್ ಗಿರಿ, ವಿನ್ಸೆಂಟ್ ಕೀಮರ್, ಮಥಾಯಸ್ ಬ್ಲೂಬಾಮ್, ಹ್ಯಾನ್ಸ್ ನೀಮನ್ ತಲಾ 7 ಅಂಕ ಗಳಿಸಿದ್ದಾರೆ. ಅರ್ಜುನ್ ಇರಿಗೇಶಿ, ವಿದಿತ್‌ ಗುಜರಾತಿ, ನಿಹಾಲ್ ಸರಿನ್ ತಲಾ 6.5 ಅಂಕ ಗಳಿಸಿ 9 ಮಂದಿ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.