
ಅನೀಶ್ ಗಿರಿ
ಬೆಂಗಳೂರು: ಮುಂಬೈನ ಐಕಾನಿಕ್ ರಾಯಲ್ ಒಪೆರಾ ಹೌಸ್‌ನಲ್ಲಿ ಇದೇ ಮೊದಲ ಬಾರಿಗೆ ಡಿಸೆಂಬರ್ 13ರಿಂದ 24ರವರೆಗೆ ನಡೆಯಲಿರುವ ಗ್ಲೋಬಲ್ ಚೆಸ್ ಲೀಗ್‌ಗಾಗಿ, ಅಲ್ಪೈನ್ SG ಪೈಪರ್ಸ್ ತಂಡ ಹೊಸ ಪ್ರತಿಭೆಗಳ ಜೊತೆಗೆ ಕಾಲಿಡುತ್ತಿದೆ. ಇದರಲ್ಲಿ ಅಂತರರಾಷ್ಟ್ರೀಯ ಆಟಗಾರರಾದ 31 ವರ್ಷದ ಡಚ್ ಗ್ರಾಂಡ್‌ಮಾಸ್ಟರ್ ಅನೀಶ್ ಗಿರಿ ಪಾಲ್ಗೊಳ್ಳುತ್ತಿದ್ದಾರೆ.
ಗ್ಲೋಬಲ್ ಚೆಸ್ ಲೀಗ್ ಭಾರತಕ್ಕೆ ಮರಳುತ್ತಿರುವ ಬಗ್ಗೆ ಮಾತನಾಡಿದ ಅನೀಶ್, 'ಭಾರತದಲ್ಲಿ ಹಲವಾರು ಚೆಸ್ ಟೂರ್ನಿಗಳು ಆಯೋಜನೆಯಾಗುತ್ತಿರುವುದು ಸಂತಸದ ವಿಚಾರ. ಚೆಸ್ ಮೇಲಿನ ಒಲವು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಡಲು ನಾನು ಕಾತುರನಾಗಿದ್ದೇನೆ ಎಂದಿದ್ದಾರೆ.
ಪ್ರಸ್ತುತ ಕ್ಲಾಸಿಕಲ್ ಫಾರ್ಮಾಟ್‌ನ ವಿಶ್ವ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಅನೀಶ್ ಗಿರಿ, ಗ್ಲೋಬಲ್ ಚೆಸ್ ಲೀಗ್‌ನ ವೇಗದ ಫಾರ್ಮಾಟ್ ನೀಡುವ ಸವಾಲಿನಲ್ಲಿ ಈ ಹಿಂದೆ ಯಶಸ್ವಿಯಾಗಿದ್ದರು.
ಅನೀಶ್ ಗಿರಿಯ ಜೊತೆಗೆ ಅಲ್ಪೈನ್ SG ಪೈಪರ್ಸ್ ತಂಡದಲ್ಲಿ ವಿಶ್ವ ನಂ. 3 ಬಿಯಾನೋ ಕರುನಾ ಮತ್ತು ಹೊ ಯಿಫಾನ್ ಸೇರಿದಂತೆ ಉನ್ನತ ಅಂತರರಾಷ್ಟ್ರೀಯ ಆಟಗಾರರಿದ್ದಾರೆ. ಜೊತೆಗೆ ಭಾರತದ ಪ್ರಮುಖ ಚೆಸ್ ತಾರೆಗಳಾದ ಆರ್. ಪ್ರಜ್ಞಾನಂದ ಮತ್ತು ಲಿಯೋನ್ ಲೂಕ್ ಮೆಂಡೋಂಸಾ ಅವರು ತಂಡವನ್ನು ಇನ್ನಷ್ಟು ಬಲಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅನೀಶ್, 'ನಮ್ಮ ತಂಡ ಅತ್ಯಂತ ಶಕ್ತಿಶಾಲಿ ಹಾಗೂ ಸಮತೋಲನದಿಂದ ಕೂಡಿದ್ದು, ತಂಡದ ಜೊತೆ ಆಡುವುದು ಮತ್ತಷ್ಟು ಉತ್ಸಾಹ ನೀಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.