ADVERTISEMENT

ಕಬಡ್ಡಿ: ದಾವಣಗೆರೆ, ಬಳ್ಳಾರಿಗೆ ಪ್ರಶಸ್ತಿ

ಸಿ.ಶಿವಾನಂದ
Published 2 ಮಾರ್ಚ್ 2019, 19:08 IST
Last Updated 2 ಮಾರ್ಚ್ 2019, 19:08 IST
ಹಂಪಿ ಉತ್ಸವದ ಅಂಗವಾಗಿ ನಡೆದ ಕಬಡ್ಡಿ ಫೈನಲ್ ಪಂದ್ಯದಲ್ಲಿ ದಾವಣಗೆರೆ ತಂಡದ ಆಟಗಾರರು ಮರಲಾನಹಳ್ಳಿ ತಂಡದ ಆಟಗಾರನನ್ನು ಹಿಡಿದ ಕ್ಷಣ
ಹಂಪಿ ಉತ್ಸವದ ಅಂಗವಾಗಿ ನಡೆದ ಕಬಡ್ಡಿ ಫೈನಲ್ ಪಂದ್ಯದಲ್ಲಿ ದಾವಣಗೆರೆ ತಂಡದ ಆಟಗಾರರು ಮರಲಾನಹಳ್ಳಿ ತಂಡದ ಆಟಗಾರನನ್ನು ಹಿಡಿದ ಕ್ಷಣ   

ಹೊಸಮಲಪನಗುಡಿ (ಹಂಪಿ): ಹಂಪಿ ಉತ್ಸವದ ಪ್ರಯುಕ್ತ ಇಲ್ಲಿ ಶನಿವಾರ ನಡೆದ ಕಬಡ್ಡಿ ಟೂರ್ನಿಯಲ್ಲಿ ದಾವಣಗೆರೆ ಮತ್ತುಬಳ್ಳಾರಿ ತಂಡಗಳು ಪ್ರಶಸ್ತಿ ಜಯಿಸಿದವು.

ಪುರುಷರ ವಿಭಾಗದ ಫೈನಲ್‌ನಲ್ಲಿ ದಾವಣಗೆರೆ ತಂಡ 21–7 ಅಂಕಗಳಿಂದಮರ್ಲಾನಹಳ್ಳಿ ತಂಡದ ಎದುರು ಜಯ ಗಳಿಸಿ ₹ 20 ಸಾವಿರ ಬಹುಮಾನ ಪಡೆಯಿತು.

ಮಹಿಳಾ ವಿಭಾಗದಲ್ಲಿ ಬಳ್ಳಾರಿ ತಂಡ 36–29ರಲ್ಲಿ ಕಂಪ್ಲಿ ಎದುರು ಜಯ ಸಾಧಿಸಿ ₹ 15 ಸಾವಿರ ಬಹುಮಾನ ತಮ್ಮದಾಗಿಸಿಕೊಂಡಿತು.

ADVERTISEMENT

ದಾವಣಗೆರೆ ತಂಡದ ನವೀನ್ ಮೊದಲ ರೈಡಿಂಗ್‌ನಲ್ಲೇ ಮೂರು ಅಂಕಗಳನ್ನು ಗಳಿಸಿ ಉತ್ತಮ ಆರಂಭಕ್ಕೆ ಕಾರಣರಾದರು.

ನಂತರವೂ ವೇಗವಾಗಿ ಅಂಕಗಳ ಸಂಖ್ಯೆಹೆಚ್ಚಿಸಿದರು. ಎರಡು ಬಾರಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಲೋನಾ ಅಂಕಗಳನ್ನು ತಂದುಕೊಟ್ಟರು.ತಂಡದ ನಾಯಕ ಮನೋಹರ ತಾಳ್ಮೆಯ ಆಟವಾಡಿ ಸಹ ಆಟಗಾರರನ್ನು ಹುರಿದುಂಬಿಸಿದರು.ಪುರುಷರ ವಿಭಾಗದಲ್ಲಿ 23 ಮತ್ತು ಮಹಿಳಾ ವಿಭಾಗದಲ್ಲಿ ಮೂರು ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.