ADVERTISEMENT

ಹಾಕಿ ಏಷ್ಯಾ ಕಪ್ | 18 ಸದಸ್ಯರನ್ನೊಳಗೊಂಡ ಭಾರತ ತಂಡ ಪ್ರಕಟ: ಹರ್ಮನ್‌ ನಾಯಕ

ಪಿಟಿಐ
Published 20 ಆಗಸ್ಟ್ 2025, 10:36 IST
Last Updated 20 ಆಗಸ್ಟ್ 2025, 10:36 IST
<div class="paragraphs"><p>ಭಾರತ ಹಾಕಿ ತಂಡದ ಆಟಗಾರರು (ಸಂಗ್ರಹ ಚಿತ್ರ) </p></div>

ಭಾರತ ಹಾಕಿ ತಂಡದ ಆಟಗಾರರು (ಸಂಗ್ರಹ ಚಿತ್ರ)

   

ಕೃಪೆ: ಪಿಟಿಐ

ನವದೆಹಲಿ: ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳುವ 18 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಇಂದು (ಬುಧವಾರ) ಪ್ರಕಟಿಸಲಾಗಿದೆ. ಮಿಡ್ ಫೀಲ್ಡರ್‌ ರಾಜಿಂದರ್‌ ಸಿಂಗ್‌ ಮತ್ತು ಫಾರ್ವರ್ಡ್‌ ಆಟಗಾರರಾದ ಶೀಲಾನಂದ್‌ ಲಾಕ್ರಾ, ದಿಲ್‌ಪ್ರೀತ್‌ ಸಿಂಗ್‌ ಸ್ಥಾನ ಪಡೆದುಕೊಂಡಿದ್ದಾರೆ.

ADVERTISEMENT

ಆಗಸ್ಟ್‌ 29ರಿಂದ 7ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿದ್ದು, ಎರಡು ಗುಂಪುಗಳಾಗಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಆತಿಥೇಯ ಭಾರತ, ಜಪಾನ್‌, ಚೀನಾ ಮತ್ತು ಕಜಾಕಸ್ತಾನ 'ಎ' ಗುಂಪಿನಲ್ಲಿವೆ. ಮಲೇಷ್ಯಾ, ದಕ್ಷಿಣ ಕೊರಿಯ, ಚೀನೀಸ್‌ ತೈಪೇಯಿ ಹಾಗೂ ಬಾಂಗ್ಲಾದೇಶ 'ಬಿ' ಗುಂಪಿನಲ್ಲಿವೆ.

ಭಾರತ ತನ್ನ ಮೊದಲ ಪಂದ್ಯದಲ್ಲಿ (ಆಗಸ್ಟ್‌ 29) ಚೀನಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ನಂತರ ಜಪಾನ್‌ (ಆಗಸ್ಟ್‌ 31) ಹಾಗೂ ಕಜಾಕಸ್ತಾನ (ಸೆಪ್ಟೆಂಬರ್‌ 1) ಸವಾಲನ್ನು ಎದುರಿಸಲಿದೆ.

ಈ ಟೂರ್ನಿಯು ಮಂದಿನ ವರ್ಷ (ಆಗಸ್ಟ್‌ 14–30) ಬೆಲ್ಜಿಯಂ ಹಾಗೂ ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಯೂ ಆಗಿರಲಿದೆ. ಅದನ್ನು ಗಮನದಲ್ಲಿರಿಸಿಕೊಂಡೇ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.

ಹರ್ಮನ್‌ಪ್ರೀತ್‌ ಸಿಂಗ್‌ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಕೃಶನ್ ಬಿ ಪಾಠಕ್‌ ಮತ್ತು ಸುರಾಜ್‌ ಕರ್ಕೆರಾ ಗೋಲ್‌ ಕೀಪಿಂಗ್‌ ಹೊಣೆ ನಿಭಾಯಿಸಲಿದ್ದಾರೆ.

ತಂಡ ಹೀಗಿದೆ

ಗೋಲ್‌ ಕೀಪರ್‌ಗಳು: ಕೃಶನ್ ಬಿ. ಪಾಠಕ್‌, ಸುರಾಜ್‌ ಕರ್ಕೆರಾ

ಡಿಫೆಂಡರ್ಸ್‌: ಸುಮಿತ್‌, ಜರ್ಮನ್‌ಪ್ರೀತ್ ಸಿಂಗ್‌, ಸಂಜಯ್‌, ಹರ್ಮನ್‌ಪ್ರೀತ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಜಗರಾಜ್‌ ಸಿಂಗ್‌

ಮಿಡ್‌ಫೀಲ್ಡರ್ಸ್‌: ರಾಜಿಂದರ್‌ ಸಿಂಗ್‌, ರಾಜ್‌ ಕುಮಾರ್‌ ಪಾಲ್‌, ಹಾರ್ದಿಕ್‌ ಸಿಂಗ್‌, ಮನ್‌ಪ್ರೀತ್ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌

ಫಾರ್ವರ್ಡ್ಸ್‌: ಮಂದೀಪ್‌ ಸಿಂಗ್‌, ಅಭಿಷೇಕ್‌, ಸುಖಜೀತ್‌ ಸಿಂಗ್‌, ಶೀಲಾನಂದ್‌ ಲಾಕ್ರಾ, ದಿಲ್‌ಪ್ರೀತ್‌ ಸಿಂಗ್‌

ಬದಲಿ ಆಟಗಾರರು: ಸೆಲ್ವಂ ಕಾರ್ತಿ, ನೀಲಮ್‌ ಸಂಜೀಪ್‌ ಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.