ADVERTISEMENT

ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಪಿಟಿಐ
Published 4 ಡಿಸೆಂಬರ್ 2021, 11:36 IST
Last Updated 4 ಡಿಸೆಂಬರ್ 2021, 11:36 IST
ಸವಿತಾ ಪೂನಿಯಾ
ಸವಿತಾ ಪೂನಿಯಾ   

ಡೋಂಗೆ, ಕೊರಿಯಾ: ಭಾರತ ಮಹಿಳಾ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ಥಾಯ್ಲೆಂಡ್‌ ಎದುರು ಕಣಕ್ಕಿಳಿಯಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಗೆಲ್ಲುವುದರಿಂದ ಭಾರತ ವಂಚಿತವಾಗಿತ್ತು. ಟೋಕಿಯೊ ಕೂಟದ ಬಳಿಕ ಮೊದಲ ಬಾರಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡುತ್ತಿದೆ.

2016ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ, 2018ರಲ್ಲಿ ಕೊರಿಯ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನ ಗಳಿಸಿತ್ತು.

ADVERTISEMENT

‘ಟೂರ್ನಿಯಲ್ಲಿ ಶುಭಾರಂಭ ಮಾಡುವತ್ತ ನಮ್ಮ ಚಿತ್ತ ಇದೆ. ಒಲಿಂಪಿಕ್ಸ್‌ ಬಳಿಕ ಮೊದಲ ಪಂದ್ಯ ಆಡುತ್ತಿರುವುದರಿಂದ ಸ್ವಲ್ಪ ಒತ್ತಡವಿದೆ‘ ಎಂದು ಭಾರತದ ತಂಡದ ನಾಯಕತ್ವ ವಹಿಸಿರುವ ಗೋಲ್‌ಕೀಪರ್ ಸವಿತಾ ಪೂನಿಯಾ ಹೇಳಿದರು.

ಚೀನಾ, ಕೊರಿಯಾ, ಜಪಾನ್‌ ಮತ್ತು ಮಲೇಷ್ಯಾ ಟೂರ್ನಿಯಲ್ಲಿ ಆಡುತ್ತಿರುವ ಇನ್ನುಳಿದ ತಂಡಗಳಾಗಿವೆ.

‘ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯ ಟ್ರೋಫಿ ಉಳಿಸಿಕೊಳ್ಳಲು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಈ ಟೂರ್ನಿ ಪ್ರಮುಖವಾಗಿದೆ‘ ಎಂದೂ ಸವಿತಾ ನುಡಿದರು.

ಡಿಸೆಂಬರ್‌ 12ರಂದು ಫೈನಲ್ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.