ಲುಸಾನ್ (ಸ್ವಿಜರ್ಲೆಂಡ್): ಭಾರತ ತಂಡವು, ಎಫ್‌ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ, ಚಿಲಿ ಮತ್ತು ಸ್ವಿಜರ್ಲೆಂಡ್ ಜೊತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಚಾಂಪಿಯನ್‌ಷಿಪ್ ಚೆನ್ನೈ ಮತ್ತು ಮಧುರೈನಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ.
‘ಡ್ರಾ’ ಸಮಾರಂಭವು ಇಲ್ಲಿನ ವಿಶ್ವ ಹಾಕಿ ಫೆಡರೇಷನ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆಯಿತು. ಮೊದಲ ಬಾರಿ ಈ ಕೂಟದಲ್ಲಿ 24 ತಂಡಗಳು ಭಾಗವಹಿಸುತ್ತಿವೆ. ಆರು ಗುಂಪುಗಳಲ್ಲಿ ಈ ತಂಡಗಳನ್ನು ತಲಾ ನಾಲ್ಕರಂತೆ ವಿಂಗಡಿಸಲಾಗಿದೆ.
ಜರ್ಮನಿ 2023ರಲ್ಲಿ ನಡೆದ ಜೂನಿಯರ್ ವಿಶ್ವ ಕಪ್ ಫೈನಲ್‌ನಲ್ಲಿ 2–1 ರಿಂದ ಫ್ರಾನ್ಸ್ ತಂಡವನ್ನು ಸೋಲಿಸಿ ದಾಖಲೆಯ ಏಳನೇ ಬಾರಿ ಚಾಂಪಿಯನ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.