ADVERTISEMENT

ಹಾಕಿ ಟೂರ್ನಿ: ಭಾರತ ಜೂನಿಯರ್ ಮಹಿಳಾ ತಂಡಕ್ಕೆ ಜಯ

ಪಿಟಿಐ
Published 30 ಸೆಪ್ಟೆಂಬರ್ 2025, 14:20 IST
Last Updated 30 ಸೆಪ್ಟೆಂಬರ್ 2025, 14:20 IST
ಹಾಕಿ
ಹಾಕಿ   

ಕೆನ್‌ಬೆರಾ (ಆಸ್ಟ್ರೇಲಿಯಾ): ಇಶಿಕಾ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ಜೂನಿಯರ್ ಮಹಿಳಾ ತಂಡ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಂಗಳವಾರ ಕೆನ್‌ಬೆರಾ ಚಿಲ್ ತಂಡವನ್ನು 3–1 ಗೋಲುಗಳಿಂದ ಸೋಲಿಸಿತು.

ಇದು ಪ್ರವಾಸದಲ್ಲಿ ಭಾರತಕ್ಕೆ ಎರಡನೇ ಜಯ. ಎರಡು ಪಂದ್ಯಗಳನ್ನು ಸೋತಿರುವ ಭಾರತ ಪ್ರವಾದ ಅಂತಿಮ ಪಂದ್ಯವನ್ನು ಇದೇ ತಂಡದ ವಿರುದ್ಧ ಗುರುವಾರ ಆಡಲಿದೆ.

ಇಶಿಕಾ ಪಂದ್ಯದ 13 ಮತ್ತು 39ನೇ ನಿಮಿಷ ಗೋಲು ಗಳಿಸಿದರು. ಸೋನಮ್ 27ನೇ ನಿಮಿಷ ಗೋಲು ಗಳಿಸಿದರು. 11ನೇ ನಿಮಿಷ ಗೋಲುಬಿಟ್ಟ ನಂತರ ಭಾರತದ ವನಿತೆಯರು ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು.

ADVERTISEMENT

ಕೆನ್‌ಬೆರಾ ತಂಡಕ್ಕೆ ನೊವೊಮಿ ಇವಾನ್ಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.