ADVERTISEMENT

ಬೆಂಗಳೂರು: ರೋಬೋಟಿಕ್ಸ್‌ ಒಲಿಂಪಿಕ್ಸ್‌ಗೆ ಐವರು ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 15:41 IST
Last Updated 18 ಅಕ್ಟೋಬರ್ 2025, 15:41 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಬೆಂಗಳೂರಿನ ಐವರು ಪ್ರತಿಭಾವಂತ ವಿದ್ಯಾರ್ಥಿಗಳು ಪನಾಮಾದಲ್ಲಿ ನಡೆಯಲಿರುವ ರೋಬೋಟಿಕ್ಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಿಂಗರಾಜ್, ಎಂ.ಪರಶುರಾಮ್‌, ಅರ್ಜುನ ಕೆ. ರಾಜ್‌, ಕೆ. ಗೌರೇಶ ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಜಿ.ಎನ್. ಚಂದನ್‌ರಾಜ್‌ ಎವಿಡಿ ಪ್ರೌಢಶಾಲೆ ವಿದ್ಯಾರ್ಥಿ.

ADVERTISEMENT

ಇದು ಒಲಿಂಪಿಕ್ಸ್ ಶೈಲಿಯ ಅಂತರರಾಷ್ಟ್ರೀಯ ರೋಬೋಟಿಕ್ಸ್‌ ಸ್ಪರ್ಧೆಯಾಗಿದ್ದು, ಒಂದು ನಿರ್ದಿಷ್ಟ ವಿಷಯಾಧಾರಿತ ಆಟದಲ್ಲಿ ಭಾಗವಹಿಸಲು ರೋಬೋಟ್‌ ನಿರ್ಮಿಸಿ, ಪ್ರೋಗ್ರಾಮಿಂಗ್‌ ಮಾಡಲು ಆಹ್ವಾನಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಭೂಮಿಯ ಮುಂದೆ ನಿಂತಿರುವ ಪ್ರಮುಖ ಸವಾಲುಗಳಲ್ಲಿ ಒಂದನ್ನು ಪರಿಹರಿಸುವ ವಿಷಯದ ಸುತ್ತ ಕೆಲಸ ಮಾಡುತ್ತವೆ.

180ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸುವ ವೇದಿಕೆಯಲ್ಲಿ ಭಾರತವನ್ನು ಬೆಂಗಳೂರಿನ ವಿದ್ಯಾರ್ಥಿಗಳು ಪ್ರತಿನಿಧಿಸುತ್ತಿದ್ದು, ಇವೆರೆಲ್ಲರೂ ಮಲ್ಲೇಶ್ವರಂನ ಅಟಲ್‌ ಟಿಂಕರಿಂಗ್‌ ಲ್ಯಾಬ್‌ನಿಂದ ಆಯ್ಕೆಯಾಗಿ, ಅಮೆಜಾನ್‌ ಫ್ಯೂಚರ್‌ ಎಂಜಿನಿಯರ್‌ ಮೇಕರ್ಸ್‌ಪೇಸ್‌ನಲ್ಲಿ ತರಬೇತಿ ಪಡೆದಿದ್ದಾರೆ.

ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಮೂಲಕ ತಂಡದ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.