ADVERTISEMENT

Hockey World Cup | ಭಾರತಕ್ಕೆ 2025ರ ಜೂನಿಯರ್‌ ಹಾಕಿ ವಿಶ್ವಕಪ್‌ ಆತಿಥ್ಯ

ಪಿಟಿಐ
Published 11 ಜೂನ್ 2024, 13:55 IST
Last Updated 11 ಜೂನ್ 2024, 13:55 IST
<div class="paragraphs"><p>ಹಾಕಿ –ಪ್ರಾತಿನಿಧಿಕ ಚಿತ್ರ</p></div>

ಹಾಕಿ –ಪ್ರಾತಿನಿಧಿಕ ಚಿತ್ರ

   

ಲುಸಾನ್‌ (ಸ್ವಿಜರ್ಲೆಂಡ್‌): ಭಾರತವು 9 ವರ್ಷಗಳ ಬಳಿಕ ಮುಂದಿನ ವರ್ಷದ ಪುರುಷರ ಜೂನಿಯರ್‌ ಹಾಕಿ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಈ ವಿಷಯವನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಕಾರ್ಯಕಾರಿ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಈ ಟೂರ್ನಿಯು 2025ರ ಡಿಸೆಂಬರ್‌ನಲ್ಲಿ ನಡೆಯಲಿದೆ. ಮೊತ್ತಮೊದಲ ಬಾರಿ ಮುಂದಿನ ಜೂನಿಯರ್ ವಿಶ್ವಕಪ್‌ನಲ್ಲಿ 24 ತಂಡಗಳು ಭಾಗವಹಿಸಲಿವೆ.

ADVERTISEMENT

ಹೆಚ್ಚಿನ ರಾಷ್ಟ್ರೀಯ ಸಂಸ್ಥೆಗಳಿಗೆ ಹೆಚ್ಚು ಅವಕಾಶಗಳನ್ನು ನೀಡುವುದು ಸಬಲೀಕರಣದ ಆಧಾರಸ್ಥಂಭ ಮತ್ತು ಅವುಗಳನ್ನು ಒಳಗೊಳ್ಳುವಂತೆ ಮಾಡುವುದು ನಮ್ಮ ಕಾರ್ಯತಂತ್ರದ ಭಾಗ ಎಂದು ಎಫ್‌ಐಎಚ್ ಅಧ್ಯಕ್ಷ ತಯ್ಯಬ್ ಇಕ್ರಮ್ ತಿಳಿಸಿದರು.

ಒಮಾನ್‌ನಲ್ಲಿ ಈ ವರ್ಷ ನಡೆದ ಎಫ್‌ಐಎಚ್‌ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ಹೆಚ್ಚು ತಂಡಗಳು ಭಾಗವಹಿಸಿದ್ದು, ಅದರ ಮೌಲ್ಯವರ್ಧಿಸಿತು ಎಂದರು.

ಹಿಂದಿನ ವರ್ಷ ಜೂನಿಯರ್ ವಿಶ್ವಕಪ್‌ 2023ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿತ್ತು. ಜರ್ಮನಿ 2–1 ರಿಂದ ಫ್ರಾನ್ಸ್ ಮೇಲೆ ಜಯಗಳಿಸಿತ್ತು. ಸ್ಪೇನ್ ಮತ್ತು ಭಾರತ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.