ADVERTISEMENT

ರಾಣಿ ಗೋಲು: ಡ್ರಾ ಪಂದ್ಯದಲ್ಲಿ ಮಹಿಳಾ ಹಾಕಿ ತಂಡ

ಪಿಟಿಐ
Published 20 ಜನವರಿ 2021, 14:47 IST
Last Updated 20 ಜನವರಿ 2021, 14:47 IST
ರಾಣಿ ರಾಂಪಾಲ್‌–ಪಿಟಿಐ ಚಿತ್ರ
ರಾಣಿ ರಾಂಪಾಲ್‌–ಪಿಟಿಐ ಚಿತ್ರ   

ಬ್ಯೂನಸ್ ಐರಿಸ್‌, ಅರ್ಜೆಂಟೀನಾ: ಹಲವು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿದ ಭಾರತ ಮಹಿಳಾ ಹಾಕಿ ತಂಡವು ಅರ್ಜೆಂಟೀನಾ ಜೂನಿಯರ್ ತಂಡದ ವಿರುದ್ಧದ ಎರಡನೇ ಪಂದ್ಯದಲ್ಲಿಯೂ ಡ್ರಾಕ್ಕೆ ಸಮಾಧಾನಪಟ್ಟುಕೊಂಡಿತು. ಭಾರತ ತಂಡದ ಪರ ನಾಯಕಿ ರಾಣಿ ರಾಂಪಾಲ್ ಏಕೈಕ ಗೋಲು ದಾಖಲಿಸಿದರು. ಪಂದ್ಯ 1–1ರಲ್ಲಿ ಸಮಬಲವಾಯಿತು.

ಪ್ರವಾಸಿ ಭಾರತ ತಂಡಕ್ಕೆ ಪಂದ್ಯದ ಮೊದಲ ನಿಮಿಷದಲ್ಲಿಯೇ ಪೆನಾಲ್ಟಿ ಕಾರ್ನರ್ ದೊರಕಿತು. ಗುರ್ಜಿತ್ ಕೌರ್‌ ಅವರು ಬಲವಾಗಿ ಹೊಡೆದ ಚೆಂಡನ್ನು ತಡೆಯುವಲ್ಲಿ ಅರ್ಜೆಂಟೀನಾ ಗೋಲುಕೀಪರ್ ಯಶಸ್ವಿಯಾದರು. ಐದನೇ ನಿಮಿಷದಲ್ಲಿ ದೀಪ್ ಗ್ರೇಸ್‌ ಎಕ್ಕಾ ಪ್ರಯತ್ನವೂ ವಿಫಲವಾಯಿತು. ಆ ಬಳಿಕ ಆತಿಥೇಯ ತಂಡಕ್ಕೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ಇದ್ದವು. 13ನೇ ನಿಮಿಷದಲ್ಲಿ ಯಶಸ್ವಿಯಾದ ಆ ತಂಡ 1–0ಯಿಂದ ಮುನ್ನಡೆಯಿತು.

37, 43, 48 ಹಾಗೂ 58ನೇ ನಿಮಿಷಗಳಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶಗಳು ಲಭಿಸಿದವು. ಕೊನೆಯ ಅವಕಾಶದಲ್ಲಿ ರಾಣಿ ರಾಂಪಾಲ್ ಕಾಲ್ಚಳಕ ತೋರಿ, ಪಂದ್ಯ ಸಮಬಲವಾಗುವಂತೆ ಮಾಡಿದರು.

ADVERTISEMENT

ಜನೆವರಿ 23ರಂದು ಭಾರತದ ಆಟಗಾರ್ತಿಯರು ಅರ್ಜೆಂಟೀನಾ ಬಿ ತಂಡದ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.