ನವದೆಹಲಿ: ಎಫ್‌ಐಎಚ್ ಪ್ರೊ ಲೀಗ್‌ನ ಯುರೋಪ್ ಲೆಗ್‌ನಲ್ಲಿ ಉತ್ತಮ ಆಟವಾಡುವ ವಿಶ್ವಾಸದೊಂದಿಗೆ ಭಾರತ ಮಹಿಳಾ ಹಾಕಿ ತಂಡ ಬುಧವಾರ ಬೆಂಗಳೂರಿನಿಂದ ನೆದರ್ಲೆಂಡ್ಸ್‌ನ ಆಮ್‌ಸ್ಟರ್ಡಾಮ್‌ಗೆ ತೆರಳಿತು.
ಅಲ್ಲಿ ಜೂನ್ 8ರವರೆಗೆ ಶಿಬಿರದಲ್ಲಿ ಭಾಗಿಯಾದ ನಂತರ ತಂಡವು ಮೊದಲ ನಾಲ್ಕು ಪಂದ್ಯಗಳನ್ನು ಆಡಲು ಲಂಡನ್‌ಗೆ ತೆರಳಲಿದೆ. ಅಲ್ಲಿ ಆಸ್ಟ್ರೇಲಿಯಾ ವಿರುದ್ಧ (ಜೂನ್ 14 ಮತ್ತು 15ರಂದು) ಮತ್ತು ಅರ್ಜೆಂಟೀನಾ ವಿರುದ್ಧ (ಜೂನ್ 17 ಮತ್ತು 18ರಂದು) ಪಂದ್ಯಗಳನ್ನು ಆಡಲಿದೆ.
ಜೂನ್ 19ರಂದು ಆ್ಯಂಟ್‌ವರ್ಪ್‌ಗೆ ತೆರಳಲಿರುವ ಭಾರತ ಅಲ್ಲಿ 21 ಮತ್ತು 22ರಂದು ಬೆಲ್ಜಿಯಂ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಬರ್ಲಿನ್‌ನಲ್ಲಿ ಚೀನಾ ವಿರುದ್ಧ 28 ಮತ್ತು 29ರಂದು ಮತ್ತೆರಡು ಪಂದ್ಯಗಳನ್ನು ಆಡುವ ಮೂಲಕ ಯುರೋಪಿಯನ್ ಲೆಗ್ ಮುಗಿಸಲಿದೆ.
ಸಲೀಮಾ ಟೆಟೆ ತಂಡದ ನೇತೃತ್ವ ವಹಿಸಿದ್ದು, ನವನೀತ್ ಕೌರ್ ಉಪನಾಯಕಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.