ADVERTISEMENT

Olympics: ಬಾಕ್ಸರ್‌ ವಿಕಾಸ್ ಕೃಷನ್‌ಗೆ ಗಾಯ, ಒಲಿಂಪಿಕ್ಸ್‌ನಿಂದ ನಿರ್ಗಮನ

ಪಿಟಿಐ
Published 25 ಜುಲೈ 2021, 2:12 IST
Last Updated 25 ಜುಲೈ 2021, 2:12 IST
ಬಾಕ್ಸಿಂಗ್‌ 69 ಕೆ.ಜಿ. ವಿಭಾಗದಲ್ಲಿ ಜಪಾನ್‌ನ ಕ್ವಿನ್ಸಿ ಮೆನ್ಸಾ ಒಕಾಜಾವಾ ವಿರುದ್ಧ ಸೆಣಸುತ್ತಿರುವ ವಿಕಾಸ್ ಕೃಷ್ಣನ್‌ – ಪಿಟಿಐ ಚಿತ್ರ
ಬಾಕ್ಸಿಂಗ್‌ 69 ಕೆ.ಜಿ. ವಿಭಾಗದಲ್ಲಿ ಜಪಾನ್‌ನ ಕ್ವಿನ್ಸಿ ಮೆನ್ಸಾ ಒಕಾಜಾವಾ ವಿರುದ್ಧ ಸೆಣಸುತ್ತಿರುವ ವಿಕಾಸ್ ಕೃಷ್ಣನ್‌ – ಪಿಟಿಐ ಚಿತ್ರ   

ಟೋಕಿಯೊ: ಗಾಯಗೊಂಡಿರುವ ಭಾರತದ ಬಾಕ್ಸರ್ ವಿಕಾಸ್ ಕೃಷನ್‌ ಟೋಕಿಯೊ ಒಲಿಂಪಿಕ್ಸ್‌ನಿಂದ ನಿರ್ಗಮಿಸಿದರು. ಇದರೊಂದಿಗೆ 69 ಕೆ.ಜಿ. ವಿಭಾಗದಲ್ಲಿ ಭಾರತದ ಪದಕದ ಕನಸು ಕನಸಾಗಿಯೇ ಉಳಿಯಿತು.

ವಿಕಾಸ್ ಕೃಷ್ಣನ್‌ ಜಪಾನ್‌ನ ಕ್ವಿನ್ಸಿ ಮೆನ್ಸಾ ಒಕಾಜಾವಾ ವಿರುದ್ಧ 0–5ರಿಂದ ಸೋಲನುಭವಿಸಿದರು. ಭುಜದ ಗಾಯದ ಕಾರಣದಿಂದ ಆರಂಭದಿಂದಲೇ ಪಂದ್ಯವು ಅವರ ಹಿಡಿತ ತಪ್ಪಿತ್ತು ಎನ್ನಲಾಗಿದೆ.

‘ತಂಡವು ಟೋಕಿಯೊಗೆ ತೆರಳುವುದಕ್ಕೂ ಮುನ್ನ ಇಟಲಿಯಲ್ಲಿ ವಿಕಾಸ್ ಕೃಷನ್‌ ಭುಜಕ್ಕೆ ಗಾಯವಾಗಿತ್ತು. ಚಿಕಿತ್ಸೆ ಪಡೆದಿದ್ದು, ಗುಣಮುಖರಾಗುವ ಭರವಸೆ ಇತ್ತು. ಯಾವುದೇ ಸಮಸ್ಯೆ ಇಲ್ಲದೆ ಅಖಾಡಕ್ಕಿಳಿದಿದ್ದರು’ ಎಂದು ಭಾರತದ ಒಲಿಂಪಿಕ್ ಪೂರ್ವ ತರಬೇತಿ ಬಗ್ಗೆ ಉಲ್ಲೇಖಿಸಿ ಭಾರತದ ಬಾಕ್ಸಿಂಗ್ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನಿಯೆವಾ ತಿಳಿಸಿದ್ದಾರೆ.

ಇಂದು ಒಕಾಜಾವಾ ಮತ್ತೆ ವಿಕಾಸ್ ಭುಜದ ಮೇಲೆ ದಾಳಿ ಮಾಡಿದರು. ಹೀಗಾಗಿ ಕೃಷನ್‌ಗೆ ಎಡಗೈಯನ್ನು ಸರಿಯಾಗಿ ಬಳಸಿಕೊಳ್ಳುವುದು ಸಾಧ್ಯವಾಗಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಆರಂಭದಿಂದ ಕೊನೆಯವರೆಗೂ ಒಕಾಜಾವಾ ಹಿಡಿತ ಸಾಧಿಸಿದ್ದರು.

ವಿಕಾಸ್ ಅವರು ಪಂದ್ಯದುದ್ದಕ್ಕೂ ತೀವ್ರ ನೋವಿನಿಂದ ಬಳಲುತ್ತಿದ್ದರು ಎಂದು ಅವರ ಆಪ್ತ ಸ್ನೇಹಿತ ನೀರಜ್ ಗೋಯಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.