ADVERTISEMENT

ಇಂಡಿಯನ್ ಗಾಲ್ಫ್ ಯೂನಿಯನ್‌ಗೆ ಐಎಒ ಮಾನ್ಯತೆ

ಪಿಟಿಐ
Published 1 ಜನವರಿ 2025, 23:30 IST
Last Updated 1 ಜನವರಿ 2025, 23:30 IST
ಗಾಲ್ಫ್
ಗಾಲ್ಫ್   

ನವದೆಹಲಿ: ಹರೀಶ್ ಕುಮಾರ್ ರೆಡ್ಡಿ ನೇತೃತ್ವದ ಇಂಡಿಯನ್ ಗಾಲ್ಫ್ ಯೂನಿಯನ್‌ಗೆ (ಐಜಿಯು) ಭಾರತ ಒಲಿಂಪಿಕ್ ಸಂಸ್ಥೆ ​​(ಐಒಎ) ಮಾನ್ಯತೆ ನೀಡಿದೆ. ಆದರೆ, ಬ್ರಿಜಿಂದರ್ ಸಿಂಗ್ ನೇತೃತ್ವದ ಸಮಿತಿಯನ್ನು ಅನೂರ್ಜಿತ ಎಂದು ಘೋಷಿಸಿದೆ.

ಇಂಡಿಯನ್ ಗಾಲ್ಫ್ ಯೂನಿಯನ್‌ಗೆ ಮಾನ್ಯತೆ ನೀಡುವ ಮೊದಲು ಒಲಿಂಪಿಕ್ ಸಂಸ್ಥೆಯು ಅದರ ಕಾರ್ಯವಿಧಾನವನ್ನು ಪರಿಶೀಲಿಸಿದೆ ಎಂದು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಸಹಿ ಮಾಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎರಡೂ ಸಂಸ್ಥೆಗಳ ಮಹಾಸಭೆ ಡಿ.15ರಂದು ನಡೆದು, ಹೊಸ ಪದಾಧಿಕಾರಿಗಳ ಆಯ್ಕೆ ನಡೆದಿತ್ತು. ಇಂಡಿಯಾ ಹಾಬಿಟಾಟ್‌ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಬ್ರಿಜೇಂದರ್‌ ಸಿಂಗ್‌ ಪುನರಾಯ್ಕೆಯಾಗಿದ್ದರು. ಒಲಿಂಪಿಕ್‌ ಭವನದಲ್ಲಿ ನಡೆದ ಸಭೆಯಲ್ಲಿ ಹರೀಶ್ ಕುಮಾರ್ ಆಯ್ಕೆಯಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.