ADVERTISEMENT

ವಿಶ್ವ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಹೊರಬಿದ್ದ ಜಾಸ್ಮಿನ್

ಪಿಟಿಐ
Published 4 ಮಾರ್ಚ್ 2024, 15:08 IST
Last Updated 4 ಮಾರ್ಚ್ 2024, 15:08 IST
<div class="paragraphs"><p>ಜಾಸ್ಮಿನ್ ಲಂಬೋರಿಯಾ</p></div>

ಜಾಸ್ಮಿನ್ ಲಂಬೋರಿಯಾ

   

ಬುಸ್ಟೊ ಅರ್ಸಿಝಿಯೊ (ಇಟಲಿ): ಮೊದಲ ವಿಶ್ವ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಯಕ ನಿರ್ವಹಣೆ ಮುಂದುವರಿದಿದೆ. ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತೆ ಜಾಸ್ಮಿನ್ ಲಂಬೋರಿಯಾ ಮೊದಲ ಸುತ್ತಿನಲ್ಲೇ ಹೊರಬಿದ್ದರು.

22 ವರ್ಷದ ಜಾಸ್ಮಿನ್ ಮಹಿಳೆಯರ 60 ಕೆ.ಜಿ. ತೂಕ ವಿಭಾಗದಲ್ಲಿ ಭಾನುವಾರ ರಾತ್ರಿ 0–5 ರಿಂದ ಜಪಾನ್‌ನ ಅಯಾಕಾ ತಗುಚಿ ಎದುರು ಒಮ್ಮತದ ತೀರ್ಪಿನಲ್ಲಿ ಸೋಲನುಭವಿಸಿದರು.

ADVERTISEMENT

ಇದಕ್ಕೆ ಮೊದಲು ದೀಪಕ್ ಭೋರಿಯಾ (51 ಕೆ.ಜಿ) ಮತ್ತು ನರೇಂದರ್ ಬೆರ್ವಾಲ್ (+92 ಕೆ.ಜಿ) ಕೂಡ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೋಟಾ ಅಡಿ ಅರ್ಹತೆ ಪಡೆಯಲು ಅವಕಾಶವಿರುವ ಈ ಟೂರ್ನಿಯಲ್ಲಿ ಭಾರತದ ಇನ್ನೂ ಆರು ಮಂದಿ ವಿವಿಧ ವಿಭಾಗಗಳಲ್ಲಿ ಕಣದಲ್ಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಲಕ್ಷ್ಯ ಚಾಹರ್ ಸೋಮವಾರ ತಡರಾತ್ರಿ ಇರಾನ್‌ನ ಮೇಸಮ್ ಘೆಶ್ಲೋಗಿ ಅವರನ್ನು ಎದುರಿಸಲಿದ್ದಾರೆ. ಇರಾನ್‌ ಸ್ಪರ್ಧಿ 2021ರ ಏಷ್ಯನ್ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತರಾಗಿದ್ದಾರೆ.

ಭಾರತದ ನಾಲ್ವರು– ನಿಖತ್ ಝರೀನ್ (50 ಕೆ.ಜಿ), ‍ಪ್ರೀತಿ ಪವಾರ್ (54 ಕೆ.ಜಿ), ಪರ್ವೀನ್ ಹೂಡ (57 ಕೆ.ಜಿ) ಮತ್ತು ಲವ್ಲೀನಾ ಬೊರ್ಗೊಹೈನ್ (75 ಕೆ.ಜಿ) ಅವರು ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ಮೂಲಕ ಪ್ಯಾರಿಸ್‌ ಕೂಟಕ್ಕೆ ಅರ್ಹತೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.