ನೀರಜ್ ಚೋಪ್ರಾ–ಸಚಿನ್ ಯಾದವ್
ಟೋಕಿಯೊ: ಇಲ್ಲಿ ನಡೆದ ವಿಶ್ವ ಜಾವೆಲಿನ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ 5ನೇ ಸುತ್ತಿನ ನಂತರ ಹೊರಬಿದ್ದರು. ಆದರೆ, ಭಾರತದ ಇನ್ನೋರ್ವ ಜಾವೆಲಿನ್ ಥ್ರೋ ಎಸೆತಗಾರ ಸಚಿನ್ ಯಾದವ್ ತನ್ನ ಚೊಚ್ಚಲ ಟೂರ್ನಿಯಲ್ಲಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದುಕೊಂಡರು
ಎರಡು ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ. 84.03 ಮೀ. ಎಸೆತದೊಂದಿಗೆ 8ನೇ ಸ್ಥಾನ ಪಡೆದರು. 2012 ಒಲಿಂಪಿಕ್ ಚಾಂಪಿಯನ್ ಟ್ರಿನಿಡಾಡ್-ಟೊಬ್ಯಾಗೊದ ಕೆಶಾರ್ನ್ ವಾಲ್ಕಾಟ್ 4ನೇ ಪ್ರಯತ್ನದಲ್ಲಿ 88.16 ಮೀ. ದೂರ ಎಸೆದು ಚಿನ್ನದ ಪದಕ ಪಡೆದುಕೊಂಡರು.
ಆರನೇ ಮತ್ತು ಅಂತಿಮ ಸುತ್ತಿನಲ್ಲಿ ಕೇವಲ ಆರು ಮಂದಿ ಅಗ್ರಸ್ಥಾನ ಪಡೆದಿದ್ದ ಕ್ರೀಡಾಪಟುಗಳು ಮಾತ್ರ ಸ್ಥಾನ ಪಡೆದುಕೊಂಡಿದ್ದರು. ಆಶ್ಚರ್ಯಕರ ರೀತಿಯಲ್ಲಿ, ಭಾರತದ ಸಚಿನ್ ಯಾದವ್ ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅವರು ಪದಕ ಗೆಲ್ಲದಿದ್ದರೂ, ವೈಯಕ್ತಿಕ ಶ್ರೇಷ್ಠ ಸಾಧನೆ 86.27 ಮೀ. ದೂರ ಎಸೆದು ತಮ್ಮ ಅತ್ಯುತ್ತಮ ಪ್ರದರ್ಶನ ತೋರಿದರು.
ಚೊಚ್ಚಲ ಪದಕ ಗೆದ್ದ ವಾಲ್ಕಾಟ್
ವಾಲ್ಕಾಟ್‌ಗೆ ಒಲಿದ ಚೊಚ್ಚಲ ಪದಕ ಇದಾಗಿದೆ. ಗ್ರೆನೇಡಾದ ಆಂಡರ್‌ಸನ್ ಪೀಟರ್ಸ್(87.38) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಮೆರಿಕದ ಕರ್ಟಿಸ್ ಥಾಂಪ್ಸನ್(86.67) ಕಂಚಿನ ಪದಕ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.