ಪ್ಯಾರಿಸ್: ಉಗಾಂಡಾದ ಜಾಕೋಬ್ ಕಿಪ್ಲಿಮೊ ಅವರು ಹಾಫ್ ಮ್ಯಾರಥಾನ್ ಓಟವನ್ನು 57 ನಿಮಿಷಗಳ ಒಳಗೆ ಕ್ರಮಿಸಿದ ಮೊದಲ ಅಥ್ಲೀಟ್ ಎನಿಸಿದರು. ಬಾರ್ಸಿಲೋನಾದಲ್ಲಿ ಭಾನುವಾರ ನಡೆದ ಈ ಓಟದಲ್ಲಿ ಅವರು 56 ನಿಮಿಷ 42 ಸೆಕೆಂಡುಗಳಲ್ಲಿ ಈ ಕೂರ ಕ್ರಮಿಸಿ ವಿಶ್ವದಾಖಲೆ ಬರೆದರು.
24 ವರ್ಷ ವಯಸ್ಸಿನ ಕಿಪ್ಲಿಮೊ ಎರಡು ಬಾರಿ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್ ಆಗಿದ್ದಾರೆ. 2021 ರಿಂದ 2024ರ ಅವಧಿಯಲ್ಲಿ ಎರಡು ಬಾರಿ ದಾಖಲೆ ಹಾಫ್ ಮ್ಯಾರಥಾನ್ ದಾಖಲೆ ಸ್ಥಾಪಿಸಿದ್ದರು. ಇಥಿಯೋಪಿಯಾದ ಯೊಮಿಫ್ ಕೆಜೆಲ್ಚಾ ಹೆಸರಿನಲ್ಲಿದ್ದ (ಕಳೆದ ಅಕ್ಟೋಬರ್‌ನಲ್ಲಿ 57ನಿ.30ಸೆ.) ದಾಖಲೆಯನ್ನು ಮುರಿದ ಕಿಪ್ಲಿಮೊ ಮತ್ತೆ ದಾಖಲೆಯ ಒಡೆಯರಾಗಿದ್ದಾರೆ. ಹಾಫ್ ಮ್ಯಾರಥಾನ್ ಓಟ 21.1 ಕಿ.ಮೀ. (13.1 ಮೈಲು) ದೂರ ಹೊಂದಿದೆ.
ಗಾಳಿಯಿಲ್ಲದ, 13 ಡಿಗ್ರಿ ಸೆಲ್ಷಿಯಸ್‌ನ ತಂಪಾದ ವಾತಾವರಣದಲ್ಲಿ ಓಡಿದ ಕಿಪ್ಲಿಪೊ ‘ನಾನು ಅತ್ಯುತ್ತಮ ಆರಂಭ ಪಡೆದೆ. ಆದರೆ ವಿಶ್ವದಾಖಲೆಯ ನಿರೀಕ್ಷೆಯಿರಲಿಲ್ಲ’ ಎಂದರು. ಅವರು 15ನೇ ವಯಸ್ಸಿನಲ್ಲೇ ರಿಯೊ ಒಲಿಂಪಿಕ್ಸ್‌ನ 5000 ಮೀ. ಓಟದಲ್ಲಿ ಸ್ಪರ್ಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.