ಲಿಯೋನೆಲ್ ಮಿಸ್ಸಿ
ಚಿತ್ರ: leomessi insta
ನವದೆಹಲಿ: ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಶನಿವಾರ ಭಾರತಕ್ಕೆ ಬಂದಿಳಿದ ಅವರು, ಕೊಲ್ಕತ್ತ ಮತ್ತು ಹೈದರಾಬಾದ್, ಮುಂಬೈ ಪ್ರವಾಸ ಮುಗಿಸಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ತಮ್ಮ ದೇಶಕ್ಕೆ ಮರಳಲಿದ್ದಾರೆ.
ಈ ಎಲ್ಲದರ ನಡುವೆ ಭಾರತೀಯ ಫುಟ್‌ಬಾಲ್ ಅಭಿಮಾನಿಗಳು ಮೆಸ್ಸಿಯವರು ಒಂದಾದರು ಸ್ಪರ್ಧಾತ್ಮಕ ಫುಟ್‌ಬಾಲ್ ಪಂದ್ಯ ಆಡಬೇಕಿತ್ತು ಎಂದು ಆಶಿಸುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ಫುಟ್‌ಬಾಲ್ ಪಂದ್ಯ ಆಡದಿರವುದಕ್ಕೆ ಒಂದು ವಿಶೇಷ ಕಾರಣವಿದೆ.
38 ವರ್ಷ ವಯಸ್ಸಿನ ಮೆಸ್ಸಿ ಪ್ರಸ್ತುತ ಭಾರತ ಪ್ರವಾಸದಲ್ಲಿ ಯಾವುದೇ ಕ್ಲಬ್ ಅಥವಾ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಅದಕ್ಕೆ ಕಾರಣ ಅವರು, ತಮ್ಮ ಎಡಗಾಲಿಗೆ ಮಾಡಿಸಿರುವ ‘ವಿಮೆ’.
ಲಿಯೋನೆಲ್ ಮೆಸ್ಸಿ ಅವರು, ವಿಶ್ವದ ಅತ್ಯಂತ ದುಬಾರಿ ಕ್ರೀಡಾ ವಿಮಾ ಪಾಲಿಸಿಗಳಲ್ಲಿ ಒಂದನ್ನು ಹೊಂದಿದ್ದಾರೆ. ಆ ಕಾರಣಕ್ಕೆ ಅವರು ಭಾರತದಲ್ಲಿ ಯಾವುದೇ ಪಂದ್ಯ ಆಡಿಲ್ಲ. ಅವರ ಎಡ ಕಾಲಿನ ವಿಮಾ ಮೊತ್ತ $900 ಮಿಲಿಯನ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹8 ಸಾವಿರ ಕೋಟಿ.
ಈ ವಿಮಾ ಪಾಲಿಸಿ ಆಟಗಾರನ ಕಾಲಿಗೆ ಯಾವುದೇ ಸಮಸ್ಯೆಗಳಾದಾಗ, ಆರ್ಥಿಕ ನಷ್ಟದ ಪರಿಹಾರವನ್ನು ತುಂಬಿ ಕೊಡುತ್ತದೆ. ಈ ವಿಮಾ ಪಾಲಿಸಿ ಪ್ರಕಾರ, ಆಟಗಾರ ತನ್ನ ಕ್ಲಬ್ ಅಥವಾ ದೇಶಕ್ಕಾಗಿ ಆಡುವಾಗ ಅನ್ವಯವಾಗುತ್ತದೆ. ತನ್ನ ಕ್ಲಬ್ ಅಥವಾ ದೇಶ ಹೊರತುಪಡಿಸಿ ಬೇರೆ ದೇಶದಲ್ಲಿ ಆಡುವಾಗ ಕಾಲಿಗೆ ಏನಾದರೂ ಸಮಸ್ಯೆ ಸಂಭವಿಸಿದರೆ, ಆಗ ಈ ವಿಮೆ ಅನ್ವಯವಾಗುವುದಿಲ್ಲ.
ಇದೇ ಇನ್ಶೂರೆನ್ಸ್‌ನ ಕಾರಣದಿಂದಾಗಿ ಮೇಜರ್ ಸಾಕರ್ ಲೀಗ್ (MLS) ನಲ್ಲಿ ಅರ್ಜೆಂಟೀನಾ ಮತ್ತು ಇಂಟರ್ ಮಿಯಾಮಿ ತಂಡಗಳ ಪರ ಆಡುವ ಮೆಸ್ಸಿ ಅವರು ಭಾರತದಲ್ಲಿ ಯಾವುದೇ ಅಧಿಕೃತ ಫುಟ್‌ಬಾಲ್ ಪಂದ್ಯವನ್ನು ಆಡಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.