ಲಕ್ಷ್ಯ ಸೇನ್
ಮಕಾವ್: ಮಕಾವ್ ಓಪನ್ ಬಿಡಬ್ಲ್ಯುಎಫ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ತರುಣ್ ಮನ್ನೇಪಲ್ಲಿ ಹಾಗೂ ಲಕ್ಷ್ಮ ಸೇನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.47 ರ‍್ಯಾಂಕ್‌ನ ತರುಣ್, ಚೀನಾದ ಹು ಝೆ ವಿರುದ್ಧ 21-12 13-21 21-18ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
23 ವರ್ಷದ ತರುಣ್ 75 ನಿಮಿಷದ ಹೋರಾಟದ ಅಂತ್ಯದಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು. ಆ ಮೂಲಕ ಬಿಡಬ್ಲ್ಯುಎಫ್ ಸೂಪರ್ 300 ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ.
ಮತ್ತೊಂದೆಡೆ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಲಕ್ಷ್ಯ ಸೇನ್, ಚೀನಾದವರೇ ಆದ ಚೆನ್ ಝು ವಿರುದ್ಧ 21-14 18-21 21-14ರ ಅಂತರದಲ್ಲಿ ಗೆಲುವು ಸಾಧಿಸಿದರು.
ಟೂರ್ನಿಯಲ್ಲಿ ಎರಡನೇ ಶ್ರೇಯಾಂಕಿತರಾಗಿರುವ ಲಕ್ಷ್ಮ, ಒಂದು ತಾಸು ಮೂರು ನಿಮಿಷದಲ್ಲಿ ಪಂದ್ಯ ವಶಪಡಿಸಿಕೊಂಡರು.
ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ತರುಣ್ ಅವರು ಮಲೇಷ್ಯಾದ ಜಸ್ಟಿನ್ ಹೋ ಸವಾಲನ್ನು ಎದುರಿಸಲಿದ್ದಾರೆ. ಹಾಗೆಯೇ ಲಕ್ಷ್ಯ ಅವರಿಗೆ ಇಂಡೋನೇಷ್ಯಾದ ಅಲ್ವಿ ಫರ್ಹಾನ್ ಸವಾಲು ಎದುರಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.