ADVERTISEMENT

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬೆಂಗಳೂರಿನ ತಿಲೋತ್ತಮಾ

ಪಿಟಿಐ
Published 27 ಡಿಸೆಂಬರ್ 2025, 14:48 IST
Last Updated 27 ಡಿಸೆಂಬರ್ 2025, 14:48 IST
ತಿಲೋತ್ತಮಾ ಸೇನ್
ತಿಲೋತ್ತಮಾ ಸೇನ್   

ಭೋಪಾಲ್: ಬೆಂಗಳೂರಿನ ಹದಿಹರೆಯದ ಶೂಟರ್ ತಿಲೋತ್ತಮಾ ಸೇನ್, ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಏಕಾಗ್ರತೆಯಿಂದ ಶೂಟ್‌ ಮಾಡಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೋಟಾದಲ್ಲಿ ಸ್ಥಾನ ಪಡೆದ ಅತಿ ಕಿರಿಯ ಶೂಟರ್ ಎನಿಸಿದ್ದ 17 ವರ್ಷ ವಯಸ್ಸಿನ ತಿಲೋತ್ತಮಾ 466.9 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ಕೇರಳದ ವಿದರ್ಸಾ ಕೆ.ವಿನೋದ್ (462.9) ಬೆಳ್ಳಿ ಮತ್ತು ರೈಲ್ವೇಸ್‌ನ ಅನುಭವಿ ಅಯೋನಿಕಾ ಪಾಲ್ (451.8) ಮೂರನೇ ಕಂಚಿನ ಪದಕ ಗಳಿಸಿದರು.

ಇದಕ್ಕೆ ಮೊದಲು ಅರ್ಹತಾ ಸುತ್ತಿನಲ್ಲಿ ತಿಲೋತ್ತಮಾ ಅವರು 591 ಸ್ಕೋರ್‌ನಡೊನೆ ಅಗ್ರಸ್ಥಾನ ಪಡೆದಿದ್ದರು. ನಿಂತು, ಮಂಡಿಯೂರಿ, ಮತ್ತು ಮಕಾಡೆ ಮಲಗಿದ ಸ್ಥಿತಿ– ಈ ಮೂರೂ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದರು. ಕರ್ನಾಟಕದವರೇ ಆದ ಅನುಷ್ಕಾ ತೋಕುರು 588ರ ಸ್ಕೋರ್‌ನೊಡನೆ ಮೂರನೇ ಸ್ಥಾನ ಗಳಿಸಿದ್ದರು. ಫೈನಲ್‌ನಲ್ಲಿ ಅವರು ಸ್ವಲ್ಪದರಲ್ಲೇ ಪದಕ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ಸರಿದರು. ಆಯುಷಿ ಪೋದ್ದಾರ್ (430.6) ಐದನೇ ಮತ್ತು ಆಸ್ಕಿ ಚೋಕ್ಸಿ (430.5) ಆರನೇ ಸ್ಥಾನ ಗಳಿಸಿದರು.

ADVERTISEMENT

ಆದರೆ ಜೂನಿಯರ್ ಮಹಿಳೆಯರ ವಿಭಾಗದ ಇದೇ ಸ್ಪರ್ಧೆಯಲ್ಲಿ ಅನುಷ್ಕಾ (447.6) ಕಂಚಿನ ಪದಕ ಗೆದ್ದರು. ಸೇನೆಯ ರಿತುಪರ್ಣಾ ದೇಶಮುಖ್ (458.6) ಚಿನ್ನ ಮತ್ತು ಹರಿಯಾಣದ ನಿಶ್ಚಲ್ (458.1) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು.

ಜೂನಿಯರ್ ಮಹಿಳೆಯರ ಟೀಮ್ ವಿಭಾಗದಲ್ಲಿ ಕರ್ನಾಟಕ 1749 ಸ್ಕೋರ್‌ನೊಡನೆ ಚಿನ್ನ ಗೆದ್ದಿತು. ಮಧ್ಯಪ್ರದೇಶ (1737) ಎರಡನೇ ಮತ್ತು ಮಹಾರಾಷ್ಟ್ರ (1729) ಮೂರನೇ ಸ್ಥಾನ ಪಡೆದವು.

ಅನುಷ್ಕಾ ತೋಕೂರು
ಅನುಷ್ಕಾ ತೋಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.