ADVERTISEMENT

ನೀರಜ್ ಚೋಪ್ರಾ ಸೇರಿದಂತೆ 11 ಕ್ರೀಡಾಪಟುಗಳಿಗೆ 'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 14:02 IST
Last Updated 27 ಅಕ್ಟೋಬರ್ 2021, 14:02 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಹೆಮ್ಮೆಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇರಿದಂತೆ 11 ಮಂದಿ ಕ್ರೀಡಾಪಟುಗಳಿಗೆಮೇಜರ್ ಧ್ಯಾನ್‌ ಚಂದ್ 'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್‌ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಗೌರವಕ್ಕೆ ನೀರಜ್ ಭಾಜನರಾಗಿದ್ದರು.

ನೀರಜ್ ಹೊರತಾಗಿ ದೇಶದ ಅತ್ಯುನ್ನತ್ತ ಕ್ರೀಡಾ ಗೌರವಕ್ಕೆ ಕುಸ್ತಿಪಟು ರವಿ ದಹಿಯಾ, ಬಾಕ್ಸರ್ ಲವ್ಲಿನಾ ಬೋರ್ಗೊಹೈನ್, ಹಾಕಿ ಪಟು ಪಿ.ಆರ್. ಶ್ರೀಜೇಶ್, ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಫುಟ್ಬಾಲ್ ಸ್ಟಾರ್ ಸುನಿಲ್ ಚೆಟ್ರಿ, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಾದ ಅವನಿ ಲೇಖರಾ, ಮನೀಶ್ ನರ್ವಾಲ್, ಸುಮಿತ್‌ ಅಂಟಿಲ್‌, ಪ್ರಮೋದ್ ಭಗತ್, ಕೃಷ್ಣಾ ನಗರ್ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ADVERTISEMENT

ಕ್ರಿಕೆಟಿಗ ಶಿಖರ್ ಧವನ್, ಪ್ಯಾರಾ ಟೇಬಲ್ ಟೆನಿಸ್ ಪಟು ಭಾವಿನಾ ಪಟೇಲ್‌, ಪ್ಯಾರಾ ಬ್ಯಾಡ್ಮಿಂಟನ್ ಪಟುಸುಹಾಸ್ ಯತಿರಾಜ್, ಪ್ಯಾರಾ ಎತ್ತರ ಜಿಗಿತ ಸ್ಪರ್ಧಿ ನಿಶಾದ್‌ ಕುಮಾರ್‌ ಸೇರಿದಂತೆ ಅರ್ಜುನ ಪ್ರಶಸ್ತಿಗೆ 35 ಕ್ರೀಡಾಪಟುಗಳನ್ನು ಶಿಫಾರಸು ಮಾಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಪುರುಷ ಹಾಕಿ ತಂಡದ ಆಟಗಾರರನ್ನು ಅರ್ಜುನ ಪ್ರಶಸ್ತಿಗೆ ಹೆಸರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.