ADVERTISEMENT

ಕಳೆಗುಂದಿದ ಒಲಿಂಪಿಕ್ಸ್‌ ಪದಕ: ಬದಲಾಯಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 0:00 IST
Last Updated 15 ಜನವರಿ 2025, 0:00 IST
<div class="paragraphs"><p>ಮನು ಭಾಕರ್</p></div>

ಮನು ಭಾಕರ್

   

ನವದೆಹಲಿ: ಹೋದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಕೆಲವು ವಿಜೇತರಿಗೆ ನೀಡಿದ ಪದಕಗಳು ಕಳೆಗುಂದುತ್ತಿವೆ. ಅದರಿಂದಾಗಿ ಅಂತರರಾಷ್ಟ್ರೀಯ ಒಲಿಂ‍ಪಿಕ್ ಕೌನ್ಸಿಲ್ (ಐಒಸಿ) ಅಂತಹ ಪದಕಗಳನ್ನು ಮರಳಿ ಪಡೆದು ಹೊಸದನ್ನು ನೀಡಲು ನಿರ್ಧರಿಸಿದೆ. 

ಭಾರತದ ಶೂಟಿಂಗ್ ತಾರೆ ಮನು ಭಾಕರ್ ಅವರು ಗಳಿಸಿದ ಎರಡು ಕಂಚಿನ ಪದಕಗಳು ಕೂಡ ಬಣ್ಣ ಕಳೆದುಕೊಂಡಿವೆ. ಅಲ್ಲದೇ ಗುಣಮಟ್ಟವು ಕೂಡ ಕುಂದಿದೆ. ಆದ್ದರಿಂದ ಅವರಿಗೂ ಹೊಸ ಪದಕಗಳನ್ನು ನೀಡಲಾಗುವುದು. 

ADVERTISEMENT

ಅಸಲಿ ಪದಕಗಳನ್ನು ಟಂಕಿಸಿದ ಸಂಸ್ಥೆಯೇ  ಹೊಸದನ್ನೂ ತಯಾರಿಸಲಿದೆ. ಅಸಲಿ ಪದಕಗಳಲ್ಲಿದ್ದ ಎಲ್ಲ ಉಬ್ಬು ಚಿತ್ರಗಳು ಮತ್ತು ವಿನ್ಯಾಸವೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.