ಅನಿತಾ ಮತ್ತು ನಾರಾಯಣ ಕೊಂಗನಪಲ್ಲಿ
ಹಾಂಗ್‌ಝೌ: ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿಸಿದ್ದಾರೆ. ಶನಿವಾರ ನಡೆದ ಪಿಆರ್3 ಮಿಶ್ರ ಡಬಲ್ಸ್ ಸ್ಕಲ್ಸ್‌ನಲ್ಲಿ ಪ್ಯಾರಾ-ರೋವರ್‌ಗಳಾದ ಅನಿತಾ ಮತ್ತು ನಾರಾಯಣ ಕೊಂಗನಪಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸ್ಪರ್ಧೆಗಳ ಅಂತ್ಯಕ್ಕೆ ಭಾರತ ಒಟ್ಟು 100 ಪದಕಗಳನ್ನು ಜಯಿಸಿದೆ. ಒಂದು ದಿನದ ಸ್ಪರ್ಧೆಗಳು ಬಾಕಿಯುಳಿದಿದ್ದು, ಭಾರತ ಆರನೇ ಸ್ಥಾನಲ್ಲಿದೆ.
ಆರ್ಚರಿ ಸ್ಪರ್ಧಿ ಶೀತಲ್ ದೇವಿ ಅವರು ಶುಕ್ರವಾರ ಪ್ಯಾರಾ ಏಷ್ಯನ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು.
ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದ ಫೈನಲ್‌ನಲ್ಲಿ ಅವರು 144–142 ರಿಂದ ಸಿಂಗಪುರದ ಅಲೀಮ್ ನೂರ್ ಸಯೀದಾ ವಿರುದ್ಧ ಗೆದ್ದರು. ಇದಕ್ಕೂ ಮುನ್ನ ಅವರು ಮಹಿಳೆಯರ ತಂಡ ವಿಭಾಗದಲ್ಲಿ ಬಂಗಾರ ಜಯಿಸಿದ್ದರು.
ಮೋದಿ ಮೆಚ್ಚುಗೆ: ಪ್ಯಾರಾ ಏಷ್ಯನ್ ಗೇಮ್ಸ್‌ನ ಮಿಶ್ರ ಡಬಲ್ಸ್ ಸ್ಕಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಅನಿತಾ ಮತ್ತು ನಾರಾಯಣ ಕೊಂಗನಪಲ್ಲಿ ಅವರಿಗೆ ಅಭಿನಂದನೆಗಳು. ಅವರ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.